Uncategorized

ಆಶ್ರಯ‌ ಮನೆ ಹಕ್ಕು ಪತ್ರ, ವಾಹನ ಹಾಗೂ ಹೊಲಿಗೆ ಯಂತ್ರ ವಿತರಿಸಿದ ಸಚಿವ ಶಿವಾನಂದ ಪಾಟೀಲ

Share

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದ ಬಸವಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ನಗರಾಭಿವೃದ್ಧಿಕೋಶ ಹಾಗೂ ಪುರಸಭೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿ +1 ಆಸರೆ ಯೋಜನೆಯಡಿ ನಿರ್ಮಿಸಲಾದ ಮನೆಗಳ ಹಕ್ಕು ಪತ್ರವನ್ನು ಸಚಿವರಾದ ಶಿವಾನಂದ್ ಪಾಟೀಲ ವಿತರಿಸಿದರು.

ಬಳಿಕ ವಿಕಲಚೇತನರಿಗೆ ಸೈಕಲ್ ಮತ್ತು ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣಾ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವರಾದ ಶಿವಾನಂದ ಪಾಟೀಲ ಅವರು ಆಶ್ರಯ ಕಾಲೋನಿಯಲ್ಲಿ ರಸ್ತೆಗಳು ಒಳಚರಂಡಿ ಕುಡಿಯುವ ನೀರಿನ ವ್ಯವಸ್ಥೆ ಹಲವಾರು ಸೌಲಭ್ಯಗಳನ್ನ ನಾವು ಮಾಡಿದ್ದೇವೆ. ಮತ್ತು ಬಡವರಿಗೆ ತುಂಬಾ ಸಹಾಯವಾಗುತ್ತದೆ ಅಂತ ಹೇಳಿದರು. ಇದೇ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರು ಸದಸ್ಯರು ಹಾಗೂ ಕಾಂಗ್ರೆಸ್ ಮುಖಂಡರು ಅಂಗವಿಕಲರು ಊರಿನ ಹಿರಿಯರು ಭಾಗವಹಿಸಿದ್ದರು.

Tags: