Vijayapura

ಭಾರತ-ಪಾಕ್ ಪಂದ್ಯಕ್ಕೆ ನನ್ನ ವಿರೋಧವಿದೆ: ವಿಜಯಪುರ ಶಾಸಕ ಯತ್ನಾಳ್

Share

ಇಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ನನ್ನ ವಿರೋಧವಿದೆ ಎಂದು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ಹೇಳಿದ್ದಾರೆ. ರವಿವಾರ ವಿಜಯಪುರ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತ ವಿರುದ್ಧ ಪಾಕಿಸ್ತಾನ ನಿರಂತರ ಭಯೋತ್ಪಾದನೆ ಮಾಡುತ್ತದೆ. ಅವರು ಭಯೋತ್ಪಾದನೆ ನಿಲ್ಲಿಸುವವರೆಗೆ ಯಾವುದೇ ಕ್ರೀಡೆ ಆಡಬಾರದು. ಗುಂಡಿಗೆ ಗುಂಡು ಕೊಡುವ ಕೆಲಸ ಮಾಡಬೇಕು ಎಂದು ಹೇಳಿದರು. ಪೆಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು ಆಪರೇಶನ್ ಸಿಂಧೂರ ನಡೆಸಿದ್ದನ್ಬು ಇಲ್ಲಿ ಸ್ಮರಿಸಬಹುದು

Tags: