
ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯಾನವರ 164ನೇ ಜಯಂತಿಯ ನಿಮಿತ್ಯ ಬೆಳಗಾವಿಯಲ್ಲಿ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಅಸೋಸಿಯೇಷನ್’ನ ವತಿಯಿಂದ ಬೈಕ್ ರ್ಯಾಲಿಯನ್ನು ನಡೆಸಲಾಯಿತು. ಬೆಳಗಾವಿಯಲ್ಲಿ ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಅಸೋಸಿಯೇಷನ್’ನ ವತಿಯಿಂದ ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯಾನವರ 164ನೇ ಜಯಂತಿಯ ನಿಮಿತ್ಯ ಹಮ್ಮಿಕೊಂಡ ರ್ಯಾಲಿಗೆ ಡಿಸಿಪಿ ನಾರಾಯಣ ಭರಮನಿ ಅವರು ಚಾಲನೆಯನ್ನು ನೀಡಿದರು.

ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಅಸೋಸಿಯೇಷನ್’ನ ಅಧ್ಯಕ್ಷ ರಮೇಶ್ ಜಿ.ಟಿ ಅವರು ಸರ್. ಎಂ. ವಿಶ್ವೇಶ್ವರಯ್ಯಾನವರ 164ನೇ ಜಯಂತಿಯನ್ನು ಅಭಿಯಂತರೆಲ್ಲರೂ ಕೂಡಿಕೊಂಡು ಉತ್ಸಾಹದಿಂದ ಆಚರಿಸುತ್ತಿದ್ದಾರೆ. ನಾಡು ಕಟ್ಟುವ ಅಭಿಯಂತರರಿಗೆ ಸಹಕರಿಸಬೇಕೆಂದರು.
ಕನ್ಸಲ್ಟಿಂಗ್ ಸಿವ್ಹಿಲ್ ಇಂಜಿನಿಯರ್ಸ್ ಅಸೋಸಿಯೇಷನ್’ನ ಉಪಾಧ್ಯಕ್ಷ ಸಿ.ಆರ್ ಪಾಟೀಲ್ ಅವರು ಸಿವ್ಹಿಲ್ ಇಂಜಿನಿಯರಿರ್ಸ್’ಗಳ ಸಹಾಯ ಪಡೆದು ವೈಜ್ಞಾನಿಕವಾಗಿ ಕಟ್ಟಡಗಳನ್ನು ನಿರ್ಮಿಸಿಕೊಳ್ಳಬೇಕೆಂದು ಕರೆ ನೀಡಿದರು.
ಮೂರನೇ ರೇಲ್ವೆ ಗೇಟ್, ಆರ್.ಪಿ.ಡಿ. ಸರ್ಕಲ್, ಜಗಜ್ಯೋತಿ ಬಸವೇಶ್ವರ ವೃತ್ತ, ಗೋಗಟೆ ಸರ್ಕಲ್, ಧರ್ಮವೀರ ಛತ್ರಪತಿ ಸಂಭಾಜೀ ವೃತ್ತ, ರಾಣಿ ಚೆನ್ನಮ್ಮ ವೃತ್ತದ ಮಾರ್ಗವಾಗಿ ಸಿಪಿಎಡ್ ಮೈದಾನಕ್ಕೆ ತಲುಪಿ ಕೊನೆಗೊಂಡಿತು.


Recent Comments