ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಬೆಳಗಾವಿ ನಗರದಲ್ಲಿ ಬೈಕ್-ಬೈಸಿಕಲ್ ರ್ಯಾಲಿಗೆ ಚಾಲನೆ ನೀಡಲಾಯಿತು. ಈ ಬೈಕ್ ರ್ಯಾಲಿಯೂ ಬೆಂಗಳೂರಿನ ವಿಧಾನಸೌಧಕ್ಕೆ ತಲುಪಿ ಕೊನೆಗೊಳ್ಳಲಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಇಂದು ಬೆಳಗಾವಿ ನಗರದ ಕಿತ್ತೂರು ಚನ್ನಮ್ಮ ವೃತ್ತದಿಂದ ಬೈಕ್-ಬೈಸಿಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು. ರ್ಯಾಲಿಗೆ ಉತ್ತರ ಶಾಸಕರಾದ ಆಸೀಫ್ ಸೇಠ್, ಮಹಾಪೌರ ಮಂಗೇಶ್ ಪವಾರ್, ಪ್ರೊಬೇಷನರಿ ಐಎಎಸ್ ಅಧಿಕಾರಿ ಅಭಿನವ ಜೈನ್, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ರಾಮನಗೌಡ ಕನ್ನೊಳ್ಳಿ ಅವರು ಚಾಲನೆ ನೀಡಿದರು.
ಉತ್ತರ ಶಾಸಕ ಆಸೀಫ್ ಸೇಠ್ ಅವರು ನಮ್ಮದು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ದೇಶವನ್ನು ಭದ್ರವಾಗಿ ಕಟ್ಟುವಲ್ಲಿ ದೇಶದ ಯುವಕರ ಪಾತ್ರ ಅತ್ಯಮೂಲ್ಯವಾಗಿದೆ. ದೇಶದಲ್ಲೆಡೆ ಇಂದು ಪ್ರಜಾಪ್ರಭುತ್ವದ ಅರಿವನ್ನು ಮೂಡಿಸಲಾಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನ ನಮ್ಮ ದೇಶಕ್ಕೆ ಸಿಕ್ಕ ಸೌಭಾಗ್ಯವಾಗಿದೆ ಎಂದರು.
ಮಹಾಪೌರ ಮಂಗೇಶ್ ಪವಾರ್ ಅವರು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಹಿನ್ನೆಲೆ ಬೆಳಗಾವಿಯಲ್ಲಿಂದು ಬೈಸಿಕಲ್ ಮತ್ತು ಬೈಕ್ ರ್ಯಾಲಿಯನ್ನು ನಡೆಸಿ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ಬೈಕ್ ರ್ಯಾಲಿಯೂ ಬೆಳಗಾವಿಯಿಂದ ಬೆಂಗಳೂರಿನ ವಿಧಾನಸೌಧದ ವರೆಗೆ ಸಾಗಲಿದೆ. ಬೈಸಿಕಲ್ ರ್ಯಾಲಿಯೂ ನಗರದಲ್ಲಿ ಸುಮಾರು 12 ಕಿಲೋ ಮೀಟರ್ ಸಂಚರಿಸಲಿದೆ ಎಂದರು.
ಬೈಕ್ ರ್ಯಾಲಿಯೂ ಬೆಂಗಳೂರಿನ ವಿಧಾನಸೌಧಕ್ಕೆ ತಲುಪಿ ಕೊನೆಗೊಳ್ಳಲಿದ್ದು, ಬೈಸಿಕಲ್ ರ್ಯಾಲಿಯೂ ಟಿಳಕವಾಡಿ ಮಾರ್ಗವಾಗಿ ಸಂಚರಿಸಿ ಜಿಲ್ಲಾಧಿಕಾರಿ ಕಚೇರಿ ಬಳಿ ಕೊನೆಗೊಳ್ಳಲಿದೆ.ಇದರಲ್ಲಿ ಬೈಕ್ ಮತ್ತು ಬೈಸಿಕಲ್ ಸವಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ಧರು.


Recent Comments