Dharwad

ಧಾರವಾಡದ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಲಾಠಿ ಚಾರ್ಜ್ ಪ್ರಕರಣ…

Share

ಧಾರವಾಡ ತಾಲೂಕಿನ ನರೇಂದ್ರ ಗ್ರಾಮದಲ್ಲಿ 11ನೇ ದಿನದ ಗಣಪತಿ ಮೂರ್ತಿ ವಿಸರ್ಜನೆ ವೇಳೆ ನಡೆದ ಲಘು ಲಾಠಿ ಪ್ರಹಾರ ಘಟನೆಗೆ ಸಂಬಂಧಿಸಿದಂತೆ, ಶನಿವಾರ ಸಂಜೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಖುದ್ದಾಗಿ ನರೇಂದ್ರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದೇವಿ ದೇವಸ್ಥಾನದಲ್ಲಿ ನರೇಂದ್ರ ಗ್ರಾಮದ ಹಿರಿಯರೊಂದಿಗೆ ಮಾತುಕತೆ ನಡೆಸಿದರು. ಈ ವೇಳೆ ಲಾಠಿ ಪ್ರಹಾರ ನಡೆಸಿದ ಠಾಣಾ ಅಧಿಕಾರಿಯ ವಿರುದ್ಧ ಕೆಂಡ ಕಾರಿದರು.

  ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಮಾತನಾಡುತ್ತಿದ್ದ ವೇಳೆ ಬಿನ್ ಡ್ರೆಸ್ ಮೇಲಿದ್ದ ಪೊಲೀಸ್ ಸಿಬ್ಬಂದಿಯೊಬ್ಬರು, ಜೋಶಿ ಅವರು ಮಾತನಾಡುವುದನ್ನೇ ವಿಡಿಯೋ ರೆಕಾರ್ಡ್ ಮಾಡುತ್ತಿದ್ದರು. ಇದನ್ನು ಗಮನಿಸಿದ ಜೋಶಿ, ರೋಷಾವೇಷ ತಾಳಿದ ಪ್ರಸಂಗ ನಡೆಯಿತು. ನೀ ಯಾರು? ಯಾಕೆ ರೆಕಾರ್ಡ್ ಮಾಡುತ್ತಿದ್ದೀಯಾ? ಮೈಯಲ್ಲಿ ಸೊಕ್ಕಾ? ಆ ಕಮತಗಿ ಹಾಗೂ ನಿನ್ನನ್ನು ಸೇರಿಯೇ ಕೋರ್ಟ್‌ಗೆ ಎಳೆಯುತ್ತೇನೆ ಎಂದು ರೋಷಾವೇಷಗೊಂಡ ಪ್ರಸಂಗ ನಡೆಯಿತು. ಕೂಡಲೇ ಆ ಬಿನ್ ಡ್ರೆಸ್ ಮೇಲೆ ಇರುವ ಪೊಲೀಸ್‌ ಸಿಬ್ಬಂದಿಯನ್ನು ಅಮಾನತು ಮಾಡಿ. ಯಾರ ಮಾತು ಕೇಳಿ ಆತ ವಿಡಿಯೋ ಮಾಡುತ್ತಿದ್ದಾನೆ? ನಡೀರಿ ಎಸ್‌ಪಿ ಕಚೇರಿಗೆ ಮುಂದೆ ಧರಣಿ ಮಾಡೋಣ ಎಂದು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮೈಕ್ ಕೆಳಗಿಟ್ಟು ಹೊರ ನಡೆಯಲು ಪ್ರಯತ್ನಿಸಿದರು. ನರೇಂದ್ರದಲ್ಲಿ ಲಾಠಿ ಪ್ರಹಾರವಾಗಲು ಸಿಪಿಐ ಕಮತಗಿಯೇ ಕಾರಣ. ನರೇಂದ್ರದಲ್ಲಿ ಎರಡು ಡಿಜೆ ಹಚ್ಚಿದ್ದರು. ಪೊಲೀಸರೇ ಹುಚ್ಚುತನದಿಂದ ಲಾಠಿ ಪ್ರಹಾರ ಮಾಡಿದ್ದಾರೆ. ಕೆಲ ಪೊಲೀಸರು ಕಾಂಗ್ರೆಸ್‌ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆ. ಇಲ್ಲಿನ ಎಸ್‌ಪಿ ದಕ್ಷ ಅಧಿಕಾರಿಯಾಗಿದ್ದಾರೆ. ನರೇಂದ್ರದಲ್ಲಿ ಲಾಠಿ ಚಾರ್ಜ್ ಮಾಡಲು ಕಾರಣರಾದ ಸಿಪಿಐ ಕಮತಗಿ ಹಾಗೂ ಬೀಟ್ ಪೊಲೀಸ್ ಸೈಯದ್‌ ಇಬ್ಬರನ್ನೂ ಅಮಾನತು ಮಾಡಬೇಕು ಎಂದು ಸಭೆಯಲ್ಲಿಯೇ ಜೋಶಿ ಆಗ್ರಹಿಸಿದರು.

ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಗಲಾಟೆ ಇಲ್ಲದೆ ಲಾಠಿ ಚಾರ್ಜ್ ಆಗಿರೋದು ಇದೊಂದು ಮೊದಲನೆಯ ಉದಾಹರಣೆ. 35 ರಾಜಕೀಯ ವರ್ಷದಲ್ಲಿ ಇಂತಹ ಘಟನೆ ಆಗಿರಲಿಲ್ಲ.
ನಾನು ಸಂಸದನಾಗಿ 25 ವರ್ಷ ಆಗಿದೆ, ರಾಷ್ಟ್ರಧ್ವಜ ಹೋರಾಟ ಮಾಡಿದ್ದೆನೆ. ಆ ಸಮಯದಲ್ಲಿ ಸರಕಾರ ಪೋಲಿಸರ ತಪ್ಪಿನಿಂದ ಘಟನೆ ಅಗಿತ್ತು. ನರೇಂದ್ರ ಗ್ರಾಮದಲ್ಲಿ ಲಾಠಿ ಚಾರ್ಜ್‌ ಮಾಡಲು ಯಾವುದೇ ಕಾರಣ ಇಲ್ಲ. ಇದ್ದಕ್ಕಿದ್ದಂಗೆ ಬಂದು ಸಿಪಿಐ ಬಂದು ಲಾಠಿ ಚಾರ್ಜ್ ಮಾಡಿಸಿದ್ದಾನೆ. ಇಬ್ಬರು ಪೇದೆಗಳಿಂದ ಲಾಠಿ ಚಾರ್ಜ್ ಮಾಡಿಸಿದ್ದಾನೆ. ಸಣ್ಣ ಸಣ್ಣ ಎಲ್ ಕೆ ಜಿ ಯುಕೆಜಿ ಮಕ್ಕಳನ್ನ ಹೊಡೆದಿದ್ದಾರೆ. ಸಿಪಿಐ ಕಮತಗಿ, ಇಬ್ಬರು ಪೋಲಿಸ್ ಪೇದೆಗಳಿಗೆ ಗ್ರಾಮದ ಕೆಲ ಜ‌ನರ ಮೇಲೆ ಸಿಟ್ಟಿದೆ. ರಾಜಕೀಯ ಕಾರಣಗಳನ್ನ ಇಟ್ಟುಕ್ಕೊಂಡು ಹಲ್ಲೆ ಮಾಡಿಸಿದ್ದಾರೆ. ಅವರು ಲಾಠಿ ಚಾರ್ಜ್ ಮಾಡಿಸಿಲ್ಲ, ಹಲ್ಲೆ ಮಾಡಿಸಿದ್ದಾರೆ. ಅವರ ಮೆಲೆ ಕ್ರಮ ಆಗಬೇಕು ಇಲ್ಲದಿದ್ದರೆ ಮುಂದೆ ಹೋರಾಟ ಮಾಡುತ್ತೆವೆ ಎಂದ ಎಚ್ಚರಿಕೆ ನೀಡಿದರು.

Tags: