ಹುಕ್ಕೇರಿ ನಗರದ ಕಾಂಗ್ರೆಸ್ ಮುಖಂಡ ಮೌನೇಶ ಪೋತದಾರ ಮನೆಯಲ್ಲಿ ವಿದ್ಯುತ್ ಸಹಕಾರಿ ಸಂಘದ ಚುನಾವಣೆ ಅಂಗವಾಗಿ ಗುಪ್ತ ಸಭೆ ಜರುಗಿಸಿ ಮಾರ್ಗದರ್ಶನ ನೀಡಿದ ಭಾರತೀಯ ಜನತಾ ಪಕ್ಷದ ಶಾಸಕ ಬಾಲಚಂದ್ರ ಜಾರಕಿಹೋಳಿ.

ಹುಕ್ಕೇರಿ ನಗರದ ಕಾಂಗ್ರೆಸ್ ಯುವ ಮುಖಂಡ ಮೌನೇಶ ಪೋತದಾರ ಮತ್ತು ಚಿಕ್ಕೋಡಿ ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮತ್ತು ಹುಕ್ಕೇರಿ ಪುರಸಭೆ ಅದ್ಯಕ್ಷ ಇಮ್ರಾನ್ ಮೋಮಿನ ಹಾಗೂ ಕಾಂಗ್ರೆಸ್ ಮುಖಂಡರ ಜೋತೆ ಪ್ತವಾಗಿ ಸಭೆ ಜರುಗಿಸಿ ಮುಂಬರುವ ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘ ಮತ್ತು ಬೆಳಗಾವಿ ಜಿಲ್ಲಾ ಬಿ ಡಿ ಸಿ ಸಿ ಬ್ಯಾಂಕ ಚುನಾವಣೆ ಕುರಿತು ಗುಪ್ತ ಸಭೆ ಜರುಗಿಸಿ ಮಾರ್ಗವದರ್ಶನ ನೀಡಿಲಾಗಿದೆ ಎಂದು ಹೇಳಲಾಗುತ್ತಿದೆ.
ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಬಾಲಚಂದ್ರ ಜಾರಕಿಹೋಳಿ ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕ ಮತ್ತು ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ಚುಣಾವಣೆ ಹಿನ್ನಲೆಯಲ್ಲಿ ಇಂದು ಹುಕ್ಕೇರಿ ನಗರಕ್ಕೆ ಆಗಮಿಸಿ ಮುಖಂಡರ ಜೋತೆ ಚರ್ಚಿಸಲಾಗಿದೆ ಈಗಾಗಲೇ ನಮ್ಮ ಗುಂಪಿನ 12 ಅಭ್ಯರ್ಥಿಗಳ ಗೆಲವು ನಿಶ್ಚಿತ ಅಲ್ಲದೆ ಬ್ಯಾಂಕಿನ ಆಡಳಿತ ಚುಕ್ಕಾಣೆ ನಮ್ಮ ಕೈಯಲ್ಲಿ ಬರುತ್ತದೆ ಅದರಲ್ಲಿ ಹುಕ್ಕೇರಿಯಲ್ಲಿ ರಮೇಶ ಕತ್ತಿ ವಿರುದ್ಧ ರಾಜೇಂದ್ರ ಪಾಟೀಲರನ್ನು ಅಭ್ಯರ್ಥಿ ಮಾಡುವಂತೆ ಆಗ್ರಹಿಸಿ ವಿವಿಧ ಸಮಾಜದ ಮುಖಂಡರ ಒತ್ತಾಯದ ಮೇರೆಗ ಅನಿವಾರ್ಯವಾಗಿ ಚುನಾವಣೆ ಮಾಡಬೇಕಾಗಿದೆ.
ಹುಕ್ಕೇರಿ ತಾಲೂಕಿನಲ್ಲಿ ಕಳೆದ 28 ವರ್ಷಗಳಿಂದ ಬಿ ಡಿ ಸಿ ಸಿ ಬ್ಯಾಂಕ ಚುನಾವಣೆ ಆಗಿಲ್ಲಾ ಇಗಲಾದರು ಸಹಕಾರಿ ಸಂಘಗಳ ಅದ್ಯಕ್ಷ, ಉಪಾದ್ಯಕ್ಷ, ಸದಸ್ಯರ ಮತ್ತು ಕಾರ್ಯದರ್ಶಿಗಳಿಗೆ ಕೈ ಮುಗಿದು ಮತ ಮತ ಕೇಳುವ ಸಂದರ್ಭ ಒದಗಿದೆ ಎಂದರು ( )
ಏನೆ ಆಗಲಿ ಜಿಲ್ಲೆಯಲ್ಲಿ ಹುಕ್ಕೇರಿ ತಾಲೂಕಿನ ವಿದ್ಯುತ್ ಸಹಕಾರಿ ಸಂಘದ ಮತ್ತು ಬಿ ಡಿ ಸಿ ಸಿ ಬ್ಯಾಂಕ ಚುನಾವಣೆಯಲ್ಲಿ ಕುರುಡು ಕಾಂಚಾಣ ಸದ್ದು ಮಾಡುತ್ತಿದ್ದು , ಜಾರಕಿಹೋಳಿ ಮತ್ತು ಜೋಲ್ಲೆ ಗುಂಪು ಕತ್ತಿ ಹಾಗೂ ಪಾಟೀಲ ಗುಂಪನ್ನು ಮೂಲೆ ಗುಂಪು ಮಾಡಲು ಹೋರಟಿದೆ ಇದಕ್ಕೆ ಮತದಾರರ ತಿರ್ಪು ಅಂತಿಮವಾಗಲಿದೆ.


Recent Comments