ಹುಕ್ಕೇರಿ ತಾಲೂಕಿನಲ್ಲಿ ವಿವಿಧ ಇಲಾಖೆ ಸಹಯೋಗದಲ್ಲಿ ಆದಿ ಕರ್ಮಯೋಗಿ ಅಭಿಯಾನ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮ ಜರುಗಿತು.
ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ,ಆರೋಗ್ಯ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಯ ಅಂಗನವಾಡಿ , ಆಶಾ ಕಾರ್ಯಕರ್ತೆಯರು, ಶಿಕ್ಷಕರು, ಗ್ರಾಮ ಪಂಚಾಯತ ಆಡಳಿತಾಧಿಕಾರಿಗಳ ಎರಡು ದಿನಗಳ ತರಬೇತಿ ಕಾರ್ಯಾಗಾರವನ್ನು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ ಅದ್ಯಕ್ಷತೆಯಲ್ಲಿ ಚಾಲನೆ ನೀಡಲಾಯಿತು.
ಹುಕ್ಕೇರಿ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಮಹೇಶ ಭಜಂತ್ರಿ ಮಾತನಾಡಿ ಆದಿ ಕರ್ಮಯೋಗಿ ಅಭಿಯಾನ ಅಂಗವಾಗಿ ವಿವಿಧ ಇಲಾಖೆಯ ಸಹಯೋಗದಲ್ಲಿ ಹುಕ್ಕೇರಿ ತಾಲೂಕಿನ 18 ಗ್ರಾಮಗಳಲ್ಲಿ ಮೂಲ ಭೂತ ಸಮಸ್ಯೆ,ರಸ್ತೆ, ಅಂಗನವಾಡಿ ಕಟ್ಟಡ ಸೇರಿದಂತೆ ಪರಿಶಿಷ್ಟ ವರ್ಗಗಳ ಜನರು ವಾಸಿಸುವ ಸ್ಥಳಗಳನ್ನು ಗುರುತಿಸಿ ಅವರಿಗೆ ಬೇಕಾಗುವ ಸೌಲಭ್ಯ ಕುರಿತು ಪಟ್ಟಿ ಮಾಡಿ ಸರ್ಕಾರಕ್ಕೆ ನೀಡುವ ಕಾರ್ಯ ಮಾಡಲಾಗುತ್ತಿದೆ ಎಂದರು
ನಂತರ ಎರಡು ದಿನಗಳ ತರಬೇತಿ ಪಡೆದ ಫಲಾನುಭವಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಹುಕ್ಕೇರಿ ತಾಲೂಕಾ ಆದಿ ಕರ್ಮಯೋಗಿ ಯೋಜನೆ ನೋಡಲ್ ಅಧಿಕಾರಿ ಶಿವಾಜಿ ಮಾಳಗೆ ಮಾತನಾಡಿ ಆದಿ ಕರ್ಮಯೋಗಿ ಅಭಿಯಾನದಲ್ಲಿ ಹುಕ್ಕೇರಿ ತಾಲೂಕಿನಲ್ಲಿ ಎರಡು ದಿನ ತರಬೇತಿ ಆಯೋಜನೆ ಮಾಡಿ ಕ್ಷೇತ್ರ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಿ ಗುಡ್ಡು ಗಾಡು ಪ್ರದೇಶದಲ್ಲಿ ವಾಸಿಸುವ ಪರಿಶಿಷ್ಟ ವರ್ಗಗಳ ಜನರ ಕುಂದು ಕೊರತೆ ಹಾಗೂ ಸಮಸ್ಯೆಗಳ ಸುಧಾರಣೆ ಕುರಿತು ಸರ್ಕಾರದ ಯೋಜನೆಯನ್ನು ವಿವಿಧ ಇಲಾಖೆ ಸಹಕಾರದಿಂದ ಯಶಸ್ವಿ ಗೋಳಿಸಲಾಗುವದು ಎಂದರು
ಸಂಪನ್ಮೂಲ ವ್ಯಕ್ತಿಗಳಾದ ಶಿಕ್ಷಣ ಇಲಾಖೆಯ ವಿನೋದ ದೀಕ್ಷಿತ, ನೀರಾವರಿ ಇಲಾಖೆಯ ಅಭಿಷೇಕ ಪವಾರ, ಆರೋಗ್ಯ ಇಲಾಖೆಯ ಮಹಾದೇವಿ ಜಕಮತಿ ಮತ್ತು ಕಲಾವತಿ ಹೀರೆಮಠ ರವರು ಎರಡು ದಿನಗಳ ಕಾಲ ತರಬೇತಿ ನೀಡಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೆಶಕ ಪಾವಟೆ, ಬಿ ಇ ಓ ಪ್ರಭಾವತಿ ಪಾಟೀಲ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.



Recent Comments