Belagavi

ವಿವಿಧ ಸೌಲಭ್ಯಗಳ ಈಡೇರಿಕೆಗಾಗಿ ಯುನೈಟೆಡ್ ಫುಡ್ ಡಿಲೇವರಿ ಕಾರ್ಮಿಕರ ಪ್ರತಿಭಟನೆ

Share

ಜೆಪ್ಟೋ ಎನ್ನುವ ಕಂಪನಿಯಲ್ಲಿ ಡಿಲೇವರಿ ಬೇಸ್ ಕಾರ್ಮಿಕರಾಗಿ ಕೆಲಸ ನಿರ್ಹಿಸುವ ಕಾರ್ಮಿಕರಿಗೆ ದೊರೆಯಬೇಕಾದ ವಿವಿಧ ಸೌಲಭ್ಯಗಳ ಈಡೇರಿಕೆಗಾಗಿ ಶನಿವಾರ ಎಐಯುಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಯುನೈಟೆಡ್ ಫುಡ್ ಡಿಲೇವರಿ ಪಾಡನರ್ಸ ಯುನಿಯನ ಸದಸ್ಯರು ಪ್ರತಿಭಟನೆ ನಡೆಸಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಿದರು.

ಬೆಳಗಾವಿ ಮಹಾನಗರದಲ್ಲಿ ಜೆಪ್ಟೋ ಕಂಪನಿಯಲ್ಲಿ ಸುಮಾರು 700ಕ್ಕೂ ಅಧಿಕ ಕಾರ್ಮಿಕರು ಡಿಲೇವರಿ ಬೇಸ್ ಅಡಿಯಲ್ಲಿ ಕಾರ್ಯನಿರ್ಹಿಸುತ್ತಿದ್ದೇವೆ ನಮ್ಮಗೆ ಜೀವ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಕಂಪನಿ ನೀಡಿಲ್ಲ. ಅಧಿಕ ಸಂದರ್ಭಗಳಲ್ಲಿ ಕಂಪನಿ ವ್ಯವಸ್ಥಾಪಕರನ್ನು ಭೇಟಿಯಾಗಿ ಚರ್ಚಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರತಿಭಟನಾಕಾರರು ಅಸಮಧಾನ ವ್ಯಕ್ತಪಡಿಸಿದರು

ಕಾರ್ಮಿಕ ಮುಖಂಡ ನ್ಯಾಯವಾದಿ ಮಾತನಾಡಿ, ಕಾರ್ಮಿಕರನ್ನು ವಿವಿಧ ಆಕರ್ಷಣೆಗೊಂದಿಗೆ ಕಂಪನಿಗೆ ತೆಗೆದುಕೊಂಡು ಬರು ಬರುತ್ತಾ ರೇಟ್ ಕಾರ್ಡ್ ಕಡಿಮೆ ಮಾಡಿ ಕಾರ್ಮಿಕರ ಹಿತ್ತಾಶಕ್ತಿಯನ್ನು ಕಡಿಮೆ ಮಾಡುತ್ತಿದ್ದಾರೆ ಈ ಬಗ್ಗೆ ಕಂಪನಿಯ ಆಡಳಿತ ಮಂಡಳಿಯೊಂದಿಗೆ ಎಷ್ಟೋ ಸಲ ಮಾತನಾಡಿದ್ದೇವೆ ನಿಮ್ಮ ಐಡಿ ಬ್ಲಾಕ್ ಮಾಡಿ ಒಂದು ವಾರದ ನಂತರ ಕೆಲಸದಿಂದ ಕೈ ಬೀಡುವ ಧಮಕಿ ಹಾಕುತ್ತಾರೆ ನಾವು ನಿಮ್ಮಲ್ಲಿ ವಿನಂತಿಸಿಕೊಳ್ಳುವುದ್ದೇನೆಂದರೆ ಕಂಪನಿ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕಾದರೆ ಕಾರ್ಮಿಕ ಹಿತ್ತಾಶಕ್ತಿಯನ್ನು ಕಾಪ಻ಡಲು ಜೀವ ವಿಮೆ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ನೀಡಬೇಕು ಎಂದರು

ಈ ಕುರಿತು ಕಾರ್ಮಿಕ ಇಲಾಖೆಯ ಅಧಿಕಾರಿ ಮಲ್ಲಿಕಾರ್ಜುನ ಗೋದಿ ಪ್ರತಿಕ್ರಿಯಿಸಿ ಎಐಯುಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಯುನೈಟೆಡ್ ಫುಡ್ ಡಿಲೇವರಿ ಪಾಡನರ್ಸ ಯುನಿಯನ ಸದಸ್ಯರು ಇಲಾಖೆಗೆ ಮನವಿ ಸಲ್ಲಿಸಿದ್ದೆರಿ ಕಂಪನಿಯವರನ್ನು ನಿಮ್ಮನ್ನು ಕರೆಯಿಸಿ ಸಂಧಾನ ಪ್ರತಿಕ್ರಿಯೇ ನಡೆಸಿ ನ್ಯಾಯ ದೊರಕಿಸಿ ಕೋಡುವ ಪ್ರಯತ್ನ ನಡೆಸುತ್ತೇವೆ. ದೇಶದಲ್ಲಿಯೇ ಕರ್ನಾಟಕದಲ್ಲಿ ಕಾರ್ಮಿಕ ಇಲಾಖೆ 2024 ರಿಂದ ಕಾರ್ಮಿಕರು ಕೆಲಸ ಮಾಡುವ ಸಮಯದಲ್ಲಿ ಸಂದರ್ಭದಲ್ಲಿ ಅವಘಡ ಸಂಭವಿಸಿದರೆ ಎಂದು ಇಲಾಖೆ ವತಿಯಿಂದ ಉಚಿತವಾಗಿ ನೋಂದಣೀ ಮಾಡಿಕೊಂಡ ಕಾರ್ಇಮಕರಿಗೆ ಜೀವವಿಮೆ ಮಾಡಲಾಗುತ್ತಿದೆ. ಯುನೈಟೆಡ್ ಫುಡ್ ಡಿಲೇವರಿ ಪಾಡನರ್ಸ ಯುನಿಯನ ಸದಸ್ಯರನ್ನು ನೋಂದಣಿ ಮಾಡಿಕೊಂಡು ಆರ್ಥಿಕ ಹಾಗೂ ಸಾಮಾಜೀಕ ಸೌಲಭ್ಯಗಳನ್ನು ನೀಡುವ ಕಾರ್ಯ ಕೈಗೊಳ್ಳಲಾಗುವುದು ಎಂದರು.

Tags: