ಇಂದು ರಾಜ್ಯ ಸಚಿವ ಸಂಪುಟದ ಸಚಿವರಾಗಿ ಎರಡನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸುತ್ತಿರುವ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲರಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ್ ಗೆ ಸಚಿವ ಸ್ಥಾನ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರಲ್ಲಿ ಸಂಭ್ರಮಾಚರಣೆ ನಡೆಯಿತು.

ವಿಜಯಪುರ ನಗರದ ಮನೆಯಲ್ಲಿ ಕುಟುಂಬ ಸದಸ್ಯರು ಸಿಹಿ ಹಂಚಿ ಸಂಭ್ರಮಿಸಿದರು. ಶಿವಾನಂದ ಪಾಟೀಲ್ ಅವರ ತಾಯಿ, ಸೊಸೆ ಹಾಗೂ ಬೆಂಬಲಿಗರಿಂದ ಸಂಭ್ರಮ ಮನೆ ಮಾಡಿತ್ತು. ವಿಜಯಪುರ ನಗರದ ಬಬಲೇಶ್ವರ ರಸ್ತೆಯಲ್ಲಿರುವ ಶಿವಾನಂದ ಪಾಟೀಲ್ ನಿವಾಸದಲ್ಲಿ ಬೆಂಬಲಿಗರು ಆಗಮಿಸಿ ಶುಭ ಕೋರಿದರು. ಎರಡನೇ ಸಲ ಸಚಿವರಾಗುತ್ತಿರುವ ಶಿವಾನಂದ ಪಾಟೀಲ್ ಇವರು ಈ ಹಿಂದೆ ಕುಮಾರಸ್ವಾಮಿ ಮೈತ್ರಿ ಸರಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಶಾಸಕ ಶಿವಾನಂದ ಪಾಟೀಲ ಇವರು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಕುಟುಂಬದ ಸದಸ್ಯರು ತೆರಳಿದ್ದಾರೆ.


Recent Comments