Belagavi

ಆಕಸ್ಮಿಕ ಬೆಂಕಿ ತಗುಲಿ ಆಪಾರ ಪ್ರಮಾಣದ ಹಾನಿ

Share

ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ 30 ಗ್ರಾಮ ಬಂಗಾರ ಸೇರಿದಂತೆ ಮನೆಯಲ್ಲಿದ್ದ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಗುರುವಾರ ಸಂಭವಿಸಿದೆ.

ಬೆಳಗಾವಿ ತಾಲೂಕಿನ ಅರಳಿಕಟ್ಟೆ ಗ್ರಾಮದ ಅಂಬೇಡ್ಕರ ಗಲ್ಲಿಯ ಹಗ್ಗದ ವ್ಯಾಪಾರಿ ಅಜಪ್ಪಾ ಹರಿಜನ ಎಂಬುವರಿಗೆ ಸೇರಿದ ಮನೆಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದೆ ಮನೆಯಿಂದ ಹೋಗೆ ಬರುತ್ತಿರುವುದನ್ನು ಕಂಡ ಅಕ್ಕಪಕ್ಕದ ನಿವಾಸಿಗಳು ಹಗ್ಗದ ವ್ಯಾಪಾರಕ್ಕೆಂದು ಬೈಲಹೊಂಗಲ ಮಾರುಕಟ್ಟೆಗೆ ತೆರಳಿದ್ದ ಅಜ್ಜಪ್ಪ ಹರಿಜನ ಅವರಿಗೆ ವಿಷಯ ತಿಳಿಸಿದ್ದಾರೆ ಅಜ್ಜಪ್ಪ ಅವರ ಪತ್ನಿ ಅಂಗನವಾಡಿ ಕಾರ್ಯೆಕರ್ತೆಯಾಗಿದ್ದು ಅವರು ಅಂಗನವಾಡಿಗೆ ಹಾಗೂ ಮಕ್ಕಳು ಶಾಲೆಗೆ ತೆರಳಿದರಿಂದ್ದ ಯಾವುದೇ ಪ್ರಾಣ ಹಾನಿಯಾಗಿಲ್ಲ ಮನೆಯಲ್ಲಿದ್ದ 30 ಗ್ರಾಂ ಬಂಗಾರ,

68 ಸಾವಿರ ಹಣ, 1.80 ಲಕ್ಷ ಮೌಲ್ಯದ ಹಗ್ಗದ ವಸ್ತುಗಳು ಸೇರಿದಂತೆ ಟಿವ್ಹಿ, ಪ್ರೀಜ್ ಇನ್ನಿತರ ಮನೆಯ ಸಾಮಗ್ರಿಗಳು ಸುಟ್ಟು ಕರಕಲಾಗಿವೆ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದ್ದು ಆಗ್ನೀಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಆಗ್ನೀ ಅವಘಡದ ಕುರಿತು ಪರಶೀಲನೆ ನಡೆಸಿದೆ.

Tags: