Kagawad

ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕರ್ನಾಟಕ ಕರವೇ ಮತ್ತು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರತಿಭಟನೆ

Share

ಕಾಗವಾಡ ತಾಲೂಕಿನ ಉಗಾರ್ ಖುರ್ದ ಪುರಸಭೆ ಎದುರು ಮುಖ್ಯಾಧಿಕಾರಿಗಳ ವಿರುದ್ಧ ಚಿಕ್ಕೋಡಿ ಜಿಲ್ಲಾ ಕರ್ನಾಟಕ ಕರವೇ ಸಂಚಾಲಕರು, ಭೀಮ ಆರ್ಮಿ ಸಂಘಟನೆ, ದಲಿತ ಸಂಘಟನೆ ವತಿಯಿಂದ ಉಗ್ರವಾದ ಪ್ರತಿಭಟನೆ ಹಮ್ಮಿಕೊಂಡಿದ್ದರು.


ಸೋಮವಾರ ರಂದು ಉಗಾರ ಖುರ್ದ ಪುರಸಭೆ ಎದುರು ಮುಖ್ಯಾಧಿಕಾರಿಗಳಾದ ಸುನಿಲ್ ಬಬಲಾದಿ ಇವರ ವಿರುದ್ಧ ಪ್ರತಿಭಟನೆ ಹಮ್ಮಿಕೊಂಡಿದ್ದರು.
ಚಿಕ್ಕೋಡಿ ಜಿಲ್ಲಾ ಕರವೆ ಸಂಚಾಲಕ ಸಂಜಯ ಬಡಿಗೇರ ಮಾಹಿತಿ ನೀಡುವಾಗ, ಉಗಾರದÀ ಮುಸ್ಲಿಂ ಸಮಾಜದ ಖುತೇಜಾ ರಮಜಾನ್ ಲಾಂಡಗೆ ಇವರು ಪ್ರಾರಂಭಿಸಿದ ಅಂಗಡಿಯನ್ನು ಪುರಸಭೆ ವತಿಯಿಂದ ಯಾವುದೇ ನೋಟಿಸ್ ನೀಡದೆ ಅದನ್ನು ತೆರವುಗೊಳಿಸಿ ಅನ್ಯಾಯ ಮಾಡಿದ ಪುರಸಭೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಅಂಗಡಿಯಲ್ಲಿರುವ ಎಲ್ಲ ಎಲೆಕ್ಟ್ರಾನಿಕ್ ವಸ್ತುಗಳು ಪೂರಸಭೆ ವಹಾನದಿಂದ ತಗೆದಕೊಂಡು ಹೋಗಿದ್ದಾರೆ.

ಅಲ್ಲದೆ ಇವರ ಹೆಸರಿನಲ್ಲಿರುವ 2 ಎಕ್ಕರ ಜಮಿನದಲ್ಲಿಯ ಮೆಕ್ಕೆ ಜೊಳ ಹೀಗ ಸೂಮಾರು 10 ಲಕ್ಷ ರೂ. ದಷ್ಟು ಆರ್ಥಿಕ ಹಾಣಿ ಮಾಡಿದ್ದಾರೆ. ಇದರಿಂದ್ದ ಮನನೊಂದು ತಂದೆ-ತಾಯಿ ಪ್ರಾಣ ಕಳೆದಕೊಂಡಿದಾರೆ. ನನ್ನಗೆ ಸಕ್ಕರೆ ಕಾಯಲೆ ಪ್ರಾರಂಭವಾಗಿದೆ. ನನ್ನ ಮೆಲ್ಲೆ ಆಗಿರುವ ಅನ್ಯಾಯ ಸರಿ ಪಡಿಸಿ ನ್ಯಾಯ ನೀಡಿರಿ ಎಂಬ ಮನವಿ ಜಿಲ್ಲೆಯ ಇಲಾಖೆಯ ಅಧಿಕಾರಿಗಳಿಗೆ ನೀಡಲಾಗಿದ್ದು, ಇಲಿಗೆ ನ್ಯಾಯ ನೀಡುವರಿಗ್ಗೆ ಪ್ರತಿಭಟನೆ ಹಮ್ಮಿಕೋಳುತ್ತೇವೆ ಎಂದರು.

ಭೀಮ ಆರ್ಮಿ ದಲಿತ ಸಂಘಟನೆಯ ಜಿಲ್ಲಾ ಸಂಚಾಲಕರಾದ ಸ್ವಾತಿ ಭಜಂತ್ರಿ ಮಾತನಾಡಿ, ನಮ್ಮ ಸಂಘಟನೆ ಕೆವಲ ದಲಿತರ ಮೆಲ್ಲೆ ಅನ್ಯಾಯವಾದಲ್ಲಿ, ಪ್ರತಿಭಟನೆ ಮಾಡುವದಲ್ಲಾ. ಈಗ ಮುಸ್ಲಿಂ ಸಮಾಜದ ಮಹಿಳೆಯ ಮಲ್ಲೆ ಅನ್ಯಾಯವಾಗಿದೆ ಈ ಕುಟಂಬಕ್ಕೆ ನ್ಯಾಯ ನೀಡುವರಿಗೆ ನಮ್ಮ್ ಹೊರಾಟ ಮುಂದೆ ವರಿಸುತ್ತೇವೆ. ಪುರಸಭೆ ಅಧಿಕಾರಿ ಈ ಕುಟುಂಬದ ಮೆಲ್ಲೆ ಅನ್ಯಾಯ ಮಾಡಿದ್ದಾರೆ, ಇವರಿಂದ ಕುಟುಂಬ ಬಿದಿಗೆ ಬಂದಿದ್ದೆ. ಇವರಿಗೆ ನ್ಯಾಯ ನೀಡುವದು ಎಲ್ಲರ ಜವಬ್ದಾರಿವಾಗಿದ್ದೆ ಎಂದರು.

ನೊಂದ ಲಾಂಡಗೆ ಕುಟುಂಬದ ಪ್ರಮುಖರಾದ ರಮಜಾನ್ ಲಾಂಡಗೆ ಹಾಗೂ ಅವರ ಧರ್ಮಪತ್ನಿ ಖುತೇಜಾ ಇವರು ಮಾತನಾಡುವಾಗ, ಪುರಸಭೆ ಮುಖ್ಯಾಧಿಕಾರಿಗಳು ನಮ್ಮ ಮೆಲ್ಲೆ ಅನ್ಯಾಯ ಮಾಡಿದಾರೆ. ಅಂಗಡಿ ತೆರವುಗೊಳಿಸುವ ಪೂರ್ವದಲ್ಲಿ ಯಾವದೆ ಸೂಚನೆ ನೀಡದೆ, ಜೆಸಿಬಿ ಮುಖಾಂತರ ಅಂಗಡಿ ಉರಳಿಸಿ ಅದರಲ್ಲಿಯ ಎಲ್ಲ ವಸ್ಥುಗಳು ತಮ್ಮ ವಾಹನದಲ್ಲಿ ಹಾಕಿಕೊಂಡು, ಮಾರಾಟ ಮಾಡಿದಾರೆ. ಸುಮಾರು 10 ಲಕ್ಷ ದಷ್ಟು ಹಾನಿವಾಗಿದ್ದೆ. ಇವರು ನ್ಯಾಯ ನೀಡದೆ ಇದ್ದಿದರಿಂದ ಜಿಲ್ಲೆಯ ಅಧಿಕಾರಿ ಮತ್ತು ಕರವೆ, ದಲಿತ ಸಂಘಟನೆಗಳ ಮೊರೆಹೊಗ್ಗಿ ನ್ಯಾಯಕೇಳಿದೇನೆ ಎಂದು ಹೇಳಿ ನಮ್ಮ ಜೀವಕ್ಕೆ ಅಪಾಯವಾದರೆ, ಈ ಅಧಿಕಾರಿಗಳೆ ಕಾರಣ ಎಂದು ಹೇಳಿದರು.

ಉಗಾರ ಪುರಸಭೆ ಅಧಿಕಾರಿ ಸುನೀಲ ಬಬಲಾದಿ ಮಾತನಾಡಿ, ತಹಶಿಲ್ದಾರರ ನೇತೃತ್ವದಲ್ಲಿ 2020 ರಂದು ಆಗಿನ ಪುರಸಭೆ ಅಧಿಕಾರಿ ರಸ್ತೆಗಳ ಅಗಲಿಕರನ ಮಡುವಾಗ, 70 ಅಂಗಡಿಗಳು ತೆರವುಗೊಳಿಸಿದರು ಅದರಲ್ಲಿ ಲಾಂಡಗೆ ಬಂದುಗಳ ಅಂಗಡಿ ಇತು. ನಾನ್ನು 2022 ರಲ್ಲಿ ಪುರಸಭೆ ಅಧಿಕಾರಿಯಾಗಿ ಅಧಿಕಾರ ಸ್ವಿಕರಿಸಿದೇನೆ. ನಾನ್ನು ಬರುವ ಪೂರ್ವದಲ್ಲಿ ತೆರವು ಆಗಿದ್ದೆ ಎಂದು ಹೇಳಿದರು.

ಕಾಗವಾಡ ಕಂದಾಯ ನೀರಿಕ್ಷಕ ಎಂ.ಬಿ.ಮುಲ್ಲಾ ಇವರಿಗೆ ಪ್ರತಿಭಟನಾಕಾರರು ಮನವಿ ಅರ್ಪಿಸಿದರು. ಪಿಎಸ್‍ಐ ಹನುಮಂತ ನರಳೆ ಸಿಬಂದಿದೊಂದ್ದಿಗೆ ಬಂದೋಬಸ್ತ ನೀಡಿದರು.
ಈ ವೇಳೆ ಜೈ ಕರ್ನಾಟಕ ಹಾಗೂ ದಲಿತ ಸಂಘಟನೆಯ ಮುಖಂಡರಾದ ಶ್ರೀಕಾಂತ ಅಸೋದೆ, ನಕುಲ ಕಾಂಬಳೆ, ಬಸವರಾಜ ಸಾಜನೆ, ಖಾನಪ್ಪಾ ಬಾಡ, ಸಿದ್ದು ಕಾಂಬಳೆ, ಸತ್ಯಪ್ಪಾ ಕಾಂಬಳೆ, ರಮೇಶ ಡಂಗೇರ, ವಿಜಯ ಬ್ಯಾಳೇ, ಸ್ವಾತಿ ಭಜಂತ್ರಿ, ಸುರೇಖಾ ಕುಸನಾಳೆ, ರಮೇಶ ಕಾಂಬಳೆ, ಬೀರು ಕಾಂಬಳೆ ಸೇರಿದಂತೆ ಅನೇಕ ದಲಿತ ಯುವಕರು ಪಾಲ್ಗೊಂಡಿದರು.

ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ

Tags: