Kagawad

ಕಿಮೀ ಪಾದಯಾತ್ರೆ ಮಾಡಿ ಅಯ್ಯಪ್ಪ ಸನ್ನಿಧಾನಕ್ಕೆ ಹೊರಟ ಉಗಾರ(ಬಿಕೆ)ಯ ಭಕ್ತರು…

Share

ಕೇರಳದ ಪವಿತ್ರ ಸ್ವಾಮೀ ಅಯ್ಯಪ್ಪನ ಸನ್ನಿಧಾನ ಶಬರಿ ಮಲೈ ವರೆಗೆ ಉಗಾರ ಬುದ್ರುಕ ಗ್ರಾಮದ ೧೪ ಅಯ್ಯಪ್ಪಸ್ವಾಮಿ ಭಕ್ತರು ತಮ್ಮ ಪಾದಯಾತ್ರೆಯನ್ನು ಆರಂಭಿಸಿದರು.
ಉಗಾರ ಬುದ್ರುಕ ಗ್ರಾಮದ ಸ್ಥಳಿಯ ಮಂದಿರದಲ್ಲಿ ಶನಿವಾರ ಸಂಜೆ ದರಿಖಾಣ ಸ್ವಾಮಿಜಿ ಇವರ ಸಾನಿಧ್ಯದಲ್ಲಿ ವಿಧಿಪೂರ್ವಕ ಪೂಜೆ ಸಲ್ಲಿಸಿ ಅಯ್ಯಪ್ಪಸ್ವಾಮಿಜಿ ಭಕ್ತರಾದ ಸೊಮನಾಥ ಗುರುಸ್ವಾಮಿ, ಐನಾಪುರದ ವಿರುಪಾಕ್ಷ ಬಡಿಗೇರ, ವಿಜಯಪುರದ ರಮೇಶ ಪಾಟೀಲ್, ಗದಗದ ಅಜೀತ ಗೋಡಬೊಲೆ, ಬೆಕ್ಕೇರಿಯ ಮಾರುತಿ ಕಾಳುಸ್ವಾಮಿ ಹಾಗೆ ಇತರ ಸ್ವಾಮಿಗಳಿಗೆ ಬಿಳ್ಕೋಡಲಾಯಿತು.
ಸೋಮನಾಥ ಗುರುಸ್ವಾಮಿಜಿ ಮಾತನಾಡಿ ಉಗಾರದಿಂದ ಅಯ್ಯಪ್ಪಸ್ವಾಮಿ ಇವರ ದರ್ಶನಕಾಗಿ ಸತತವಾಗಿ ೬ನೇ ವರ್ಷ ಪಾದಯಾತ್ರೆ ಕೈಗೊಂಡಿದ್ಧೇವೆ. ಪ್ರತಿ ದಿನ ಸುಮಾರು ೩೦ ರಿಂದ ೪೦ ಕಿ.ಮಿ. ಅಂತರ ಕಾಲುನಡಗ್ಗೆಯಿಂದ ೨೮ ದಿನಗಳಲ್ಲಿ ೧೪೦೦ ಕಿ.ಮಿ. ಅಂತರ ಪಾದಯತ್ರೆ ಮಾಡುತ್ತೇವೆ. ಬರುವ ದಿನಾಂಕ ೯ ರವರಿಗೆ, ಬೇರೆ-ಬೇರೆ ಮಾರ್ಗವಾಗಿ ಪಾದಯತ್ರೆ ಕೈಗೊಂಡ ಭಕ್ತರೊಂದಿಗೆ ಬೆಳಗಾವಿ ಹತ್ತಿರ ಕೂಡುತ್ತೇವೆ ಎಂದು ಹೇಳಿದರು.

ದರಿಖಾಣ ಸ್ವಾಮಿಜಿ, ಉಗಾರ ಪುರಸಭೆ ಸದಸ್ಯ ಗಂಗಾದರ ಕಲಾಲ ಇವರು ಅಯ್ಯಪ್ಪ ದೇವರಬಗ್ಗೆ ಭಕ್ತರಿಗೆ ಮಾಹಿತಿ ನೀಡುವಾಗ ಅಯ್ಯಪ್ಪ ದೇವರು ಸಮರ್ಪಿತವಾಗಿರುವ ಶಬರಿಮಲೆ ಶ್ರೀ ಧರ್ಮ ಶಾಸ್ತಾ ದೇವಾಲಯವು ಕೇರಳದ ಎಲ್ಲಾ ಶಾಸ್ತಾ ದೇವಾಲಯಗಳಲ್ಲಿ ಅತ್ಯಂತ ಪ್ರಸಿದ್ಧ ಮತ್ತು ಪ್ರಮುಖವಾಗಿದೆ. ಇದು ಅನೇಕ ವಿಷಯಗಳಲ್ಲಿ ವಿಶಿಷ್ಟವಾಗಿದೆ. ಜಾತಿ, ಧರ್ಮ ಅಥವಾ ಧರ್ಮದ ಭೇದವಿಲ್ಲದೆ ಎಲ್ಲರಿಗೂ ದೇವಾಲಯವು ತೆರೆದಿರುವುದರಿಂದ ಅನನ್ಯತೆಯು ಅದರ ಧ್ವನಿಯನ್ನು ಸಂಗ್ರಹಿಸುತ್ತದೆ.

ಶಬರಿಮಲೆಗೆ ಹೋಗುವ ಮೊದಲು ಯಾತ್ರಿಕರು ತಮ್ಮ ಮನಸ್ಸನ್ನು ಶುದ್ಧೀಕರಿಸಲು ೪೧ ದಿನಗಳ ಉಪವಾಸವನ್ನು ಅನುಸರಿಸಬೇಕು ಎಂದು ಹೇಳಲಾಗುತ್ತದೆ. ಪಂಪಾ ವರೆಗೆ ಮಾತ್ರ ವಾಹನಗಳು ಹೋಗಬಹುದಾದ್ದರಿಂದ ಕಾಡಿನಲ್ಲಿ ಕಠಿಣ ಹಾದಿಯಲ್ಲಿಯೇ ದೇವಸ್ಥಾನಕ್ಕೆ ಪ್ರಯಾಣ ಬೆಳೆಸಬೇಕು. ಈ ದೇವಾಲಯವು ದಕ್ಷಿಣದ ರಾಜ್ಯಗಳಾದ ಕೇರಳ, ತಮಿಳುನಾಡು, ಕರ್ನಾಟಕ ಮತ್ತು ಆಂಧ್ರಪ್ರದೇಶದಿಂದ ಮಾತ್ರವಲ್ಲದೆ ದೇಶ ಮತ್ತು ವಿದೇಶಗಳ ಇತರ ಭಾಗಗಳಿಂದ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ.
ತೀರ್ಥಯಾತ್ರೆಯ ಮತ್ತೊಂದು ಮಹತ್ವದ ಅಂಶವೆಂದರೆ ಅಯ್ಯಪ್ಪನ ಮುಂದೆ ಶ್ರೀಮಂತ ಅಥವಾ ಬಡವ, ಅಕ್ಷರಸ್ಥ ಅಥವಾ ಅನಕ್ಷರಸ್ಥ ಎಲ್ಲ ಯಾತ್ರಾರ್ಥಿಗಳು ಸಮಾನರು ಮತ್ತು ಅವರೆಲ್ಲರೂ ಪರಸ್ಪರ ಅಯ್ಯಪ್ಪ ಅಥವಾ ಸ್ವಾಮಿ ಎಂದು ಸಂಬೋಧಿಸುತ್ತಾರೆ.

Tags:

kagawad shri ayyappa swamy