Belagavi

ಬೆಳಗಾವಿಯಲ್ಲಿ ಈದ್ ಮಿಲಾದ್ ಮೆರವಣಿಗೆ…

Share

ಬೆಳಗಾವಿಯಲ್ಲಿ ಗಣೇಶೋತ್ಸವದ ಹಿನ್ನೆಲೆ ಮುಂದೂಡಲ್ಪಟ್ಟಿದ್ದ ಈದ್-ಎ-ಮಿಲಾದ್ ಉನ್ ನಬಿ ಮೆರವಣಿಗೆಯೂ ಇಂದು ಅತ್ಯಂತ ಉತ್ಸಾಹದಲ್ಲಿ ನಡೆಯಿತು.

ಬೆಳಗಾವಿ ನಗರದಲ್ಲಿ ಇಂದು ತಂಜೀಮ್ ಕಮೀಟಿ, ಬಾರಾ ಇಮಾಮ್ ಮಾಲಿ ಮೊಹಲ್ಲಾ ಮಸ್ಜೀದ್ ಜಿನ್ನಾ ಚೌಕ್’ನಿಂದ ವಿವಿಧ ಗಣ್ಯರ ಉಪಸ್ಥಿತಿಯಲ್ಲಿ ಮೆರವಣಿಗೆಗೆ ಚಾಲನೆಯನ್ನು ನೀಡಿಲಾಯಿತು. ಇದಕ್ಕೂ ಮುನ್ನ ನಡೆದ ಸಮಾರಂಭವನ್ನು ಉದ್ಧೇಶಿಸಿ ಮೌಲಾನಾ ಸಯ್ಯದ್ ಮೊಹ್ಮದ್ ಹಜರತ್ ಕಾಶೀಮ್ ಸಾಬ್ ಅವರು ಮೊಹ್ಮದ್ ಪೈಗಂಬರರ ಜನ್ಮ ಮತ್ತು ಅವರು ನೀಡಿದ ಮಾನವೀಯತೆಯನ್ನು ಸಂದೇಶಗಳು ತೋರಿಸಿಕೊಟ್ಟ ಹಾದಿಯಲ್ಲಿ ನಡೆಯಬೇಕೆಂದರು.  ಉತ್ತರ ಶಾಸಕ ಆಸೀಫ್ ಸೇಠ್ ಅವರು ಮೊಹ್ಮದ್ ಪೈಗಂಬರರು ನೀಡಿದ ಪ್ರೀತಿ, ಶಾಂತಿ ಸೌಹಾರ್ದತೆಯ ಸಂದೇಶವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು. ಪೈಗಂಬರರು ನೀಡಿದ ಹಕ್ಕುಗಳು, ಸಂದೇಶಗಳ ದಾರಿಯಲ್ಲಿ ನಡೆದು ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯಬೇಕು ಎಂದರು. 

ಮಾಜಿ ಶಾಸಕ ಫಿರೋಜ್ ಸೇಠ್ ಅವರು, ಈ ಬಾರಿ ಗಣೇಶೋತ್ಸವದ ಹಿನ್ನೆಲೆ ಒಂದು ವಾರದ ಬಳಿಕ ಈದ್ ಮಿಲಾದ್ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಆದರೇ, ಎಲ್ಲರೂ ಒಂದಾಗಿದ್ದರೇ, ಗಣೇಶೋತ್ಸವ ಮತ್ತು ಈದ್ ಮಿಲಾದ್ ಮೆರವಣಿಗೆ ಸೌಹಾರ್ದತೆಯೊಂದಿಗೆ ಒಂದೇ ದಿನ ನಡೆಸಬಹುದು ಎಂದರು. ಪಾಲ್ಯೆಸ್ತಿನ್ ದೇಶಕ್ಕೆ ಬೆಂಬಲಿಸಿದ ಪಿಎಂ ಮೋದಿ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು. 

ಬೆಳಗಾವಿ ಜಿಲ್ಲಾಧಿಕಾರಿಗಳ ಮೊಹ್ಮದ್ ರೋಷನ್ ಅವರು ಈದ್ ಎ ಮಿಲಾದ್ ಉನ್ ನಬಿಯೂ ಮೊಹ್ಮದ್ ಪೈಗಂಬರರ ಜನ್ಮೋತ್ಸವದ ಇತಿಹಾಸ ಮತ್ತು ಉದ್ಧೇಶವನ್ನು ತಿಳಿಸಿದರು. ಮೊಹ್ಮದ್ ಪೈಗಂಬರರು ಇಡೀ ಮಾನವೀಯ ಜೀವನಕ್ಕೆ ನೀಡಿದ ಸಂದೇಶವನ್ನು ಅರಿತು ಬಾಳಬೇಕೆಂದರು. ಕಳೆದ 3 ವರ್ಷಗಳಿಂದ ಗಣೇಶೋತ್ಸವದ ಹಿನ್ನೆಲೆ ಮುಸ್ಲಿಂ ಸಮಾಜವು ಈದ್ ಎ ಮಿಲಾದ್ ಮೆರವಣಿಗೆಯನ್ನು ಮುಂದೂಡಿ ಸಹಕರಿಸುವ ಮೂಲಕ ಶಾಂತಿ ಮತ್ತು ಸೌಹಾರ್ದತೆಗೆ ಮಾದರಿಯಾಗಿದೆ. ಇದೇ ವೇಳೆ ಜಿಲ್ಲಾಧಿಕಾರಿ ಮೊಹ್ಮದ್ ರೋಷನ್ ಅವರು ತಮ್ಮ ಶಾಯರಿಗಳ ಮೂಲಕ ಶಾಂತಿ ಸೌಹರ್ದತೆಯ ಸಂದೇಶವನ್ನು ನೀಡಿ, ಬೆಳಗಾವಿಯ ಸೌಹಾರ್ದತೆ ಇಡಿ ಜಗತ್ತಿಗೆ ಮಾದರಿಯಾಗಲಿ ಎಂದರು. 

ಬೆಳಗಾವಿ ನಗರ ಪೊಲೀಸ್ ಆಯುಕ್ತರಾದ ಭೂಷಣ್ ಬೋರಸೆ ಅವರು ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ನೀಡಿ, ಮೊಹ್ಮದ್ ಪೈಗಂಬರರ ಶಾಂತಿ – ಸೌಹಾರ್ದತೆಯ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. 

ಬೆಳಗಾವಿಯ ನಗರದ ಡಿಸಿಪಿಯಾಗಿದ್ದ ಸೂಪರಿಟೆಂಡೆಂಟ್ ಆಫ್ ಪೊಲೀಸ್ ರೋಹನ್ ಜಗದೀಶ್ ಅವರು ವಿಶೇಷವಾಗಿ ಈದ್ ಮಿಲಾದ್ ಹಬ್ಬದ ನಿಯೋಜನೆಗೆ ಆಗಮಿಸಿ, ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ತಿಳಿಸಿದರು. 

ಇನ್ನು ಮಾಜಿ ನಗರಸೇವಕ ರಂಜೀತ್ ಚವ್ಹಾಣ್ ಪಾಟೀಲ್ ಅವರು ಬೆಳಗಾವಿಯಲ್ಲಿ ಹಿಂದೂ ಮುಸ್ಲಿಂ ಬಾಂಧವರು ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬಗಳನ್ನು ಪರಸ್ಪರ ಸಹಯೋಗದೊಂದಿಗೆ ನಡೆಸಿಕೊಂಡು ಬರಲಾಗುತ್ತಿದೆ. ಬೆಳಗಾವಿ ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆಯೂ ಎಂದಿಗೂ ಅಖಂಡಿತವಾಗಿರಲಿ ಎಂದರು. 

ಇನ್ನು ಬಾಬುಲಾಲ್ ಪುರೋಹಿತ್ ಅವರು ಕೂಡ ಎಲ್ಲರಿಗೂ ಹಬ್ಬದ ಶುಭಾಷಯಗಳನ್ನು ನೀಡಿದರು. 

ಈ ಸಂದರ್ಭದಲ್ಲಿ ಮೌಲಾನಾಗಳು, ಮುಸ್ಲಿಂ ಸಮಾಜದ ಮುಖಂಡರು ಮತ್ತು ಸಮಾಜ ಬಾಂಧವರು ಭಾಗಿಯಾಗಿದ್ಧರು. ನಂತರ ಮೆರವಣಿಗೆಯೂ ಆರಂಭಗೊಂಡು, ಫೋರ್ಟ್ ರಸ್ತೆ, ಆರ್.ಟಿ.ಓ. ಸರ್ಕಲ್ ರಾಣಿ ಚೆನ್ನಮ್ಮ ವೃತ್ತ, ಕಾಲೇಜ್ ರೋಡ್ ಮಾರ್ಗವಾಗಿ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ, ಕ್ಯಾಂಪ್ ಅಸಾದಖಾನ್ ದರ್ಗಾಕ್ಕೆ ತಲುಪಿ ಕೊನೆಗೊಂಡಿತು.

Tags: