ಖಾನಾಪೂರ ತಾಲೂಕಿನ ಹುಳಂದ ಗ್ರಾಮದಲ್ಲಿ ಕರಡಿ ದಾಳಿಗೆ ವಾಸುದೇವ ಗವಡೆ ಎಂಬವರು ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ ಈ ಕರಡಿ ದಾಳಿಗೆ ವಾಸುದೇವ ಗವಡೆ ಅವರ ಒಂದು ಕಣ್ಣು ಸಂಪೂರ್ಣ ಹಾಳಾಗಿದ್ದು, ಅವರನ್ನು ಚಿಕಿತ್ಸೆಗಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಈ ಘಟನೆಯಿಂದ ಗ್ರಾಮದ ಸುತ್ತಲೂ ಭಯದ ವಾತಾವರಣ ನಿರ್ಮಾಣವಾಗಿದೆ

ಈ ಪ್ರಕರಣದ ಬಗ್ಗೆ ಖಾನಾಪೂರ ಬ್ಲಾಕ್ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಹೋರಾಟದ ಎಚ್ಚರಿಕೆ ನೀಡಿದೆ ಕಾಡು ಪ್ರಾಣಿಗಳಿಂದ ರಕ್ಷಣೆ ಇಲ್ಲದೆ ರೈತರು, ಸಾರ್ವಜನಿಕರಿಗೆ ಬಹಳ ಆತಂಕ ಇದರೂ ಕೂಡಾ ಅರಣ್ಯ ಇಲಾಖೆ ನಿರ್ಲಕ್ಷ್ಯ ಧೋರಣೆ ಮಾಡಿದ್ದು ಸೂಕ್ತ ರಕ್ಷಣೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ ಆದ್ದರಿಂದ ಎಚ್ಚರಿಕೆ ನೀಡಿದೆ.
ಅಲ್ತಾಫ್ ಎಂ ಬಸರೀಕಟ್ಟಿ
ಇನ್ ನ್ಯೂಸ್ ಖಾನಾಪೂರ


Recent Comments