Belagavi

ಶೀಘ್ರದಲ್ಲೇ ಶಹಾಪೂರ ಮಾರುಕಟ್ಟೆ ಮಳಿಗೆಗಳ ಹಂಚಿಕೆ

Share

ಬೆಳಗಾವಿಯ ಶಹಾಪೂರದಲ್ಲಿ 5 ವರ್ಷಗಳ ಹಿಂದೆ ನಿರ್ಮಿಸಿರುವ ಮಾರುಕಟ್ಟೆ ಮಳಿಗೆಗಳು ಶೀಘ್ರದಲ್ಲೇ ವ್ಯಾಪಾರಿಗಳಿಗೆ ಹಂಚಿಕೆ ಮಾಡಲಿದ್ದು, ಒಂದು ಬದಿ ಚರ್ಮೋದ್ಯೋಗ ಮತ್ತು ಇನ್ನೊಂದು ಬದಿ ಕಾಯಿಪಲ್ಲೆ ಮಾರುಕಟ್ಟೆಗೆ ಪ್ರಾಧಾನ್ಯತೆ ನೀಡಲಾಗುತ್ತಿದೆ ಎಂದು ದಕ್ಷಿಣ ಶಾಸಕ ಅಭಯ್ ಪಾಟೀಲ್ ಅವರು ಹೇಳಿದರು.

ಬೆಳಗಾವಿಯ ಶಹಾಪೂರದಲ್ಲಿ ನಿರ್ಮಾಣಗೊಂಡಿರುವ ಮಾರುಕಟ್ಟೆ ಮಳಿಗೆಗಳಿಗೆ ಭೇಟಿ ನೀಡಿ ಅವರು ಪರಿಶೀಲಿಸಿದರು.

ಬಳಿಕ ಇನ್ ನ್ಯೂಸ್’ನೊಂದಿಗೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ ಅವರು ಕಾರಣಾಂತರಗಳಿಂದ ಕಳೆದ 5 ವರ್ಷದ ಹಿಂದೆ ನಿರ್ಮಿಸಿದ್ದ ಶಹಾಪುರ ಮಾರುಕಟ್ಟೆಯ ಮಳಿಗೆಗಳ ಹಂಚಿಕೆಯಾಗಿರಲಿಲ್ಲ. ಈಗ ಸ್ಥಳೀಯರ ಅಭಿಪ್ರಾಯ ಸಂಗ್ರಹಿಸಿ , ಮಹಾಪಾಲಿಕೆಯ ವತಿಯಿಂದ ಬಣ್ಣದ ಕಾರ್ಯ ಮತ್ತು ವಿದ್ಯುತ್ ದೀಪಗಳನ್ನು ಅಳವಡಿಸಲಾಗುವುದು. ಒಂದು ಬದಿ ಚರ್ಮೋದ್ಯೋಗ ಮತ್ತು ಇನ್ನೊಂದು ಬದಿ ತರಕಾರಿ ಮಾರುಕಟ್ಟೆಗೆ ಅವಕಾಶ ಕಲ್ಪಿಸಲಾಗುವುದು. ಚರ್ಮೋದ್ಯೋಗಕ್ಕೆ ಶೋರೂಂ ರೀತಿ ಶಾಸಕರ ನಿಧಿಯಲ್ಲಿ ರಾಜ್ಯದಲ್ಲೇ ಮಾದರಿ ಮಾರುಕಟ್ಟೆ ನಿರ್ಮಿಸಲಾಗುವುದು ಎಂದರು. 

ಈ ಸಂದರ್ಭದಲ್ಲಿ ನಗರಸೇವಕ ನಿತೀನ್ ಜಾಧವ್, ಮಹಾಪಾಲಿಕೆ ಅಧಿಕಾರಿಗಳು ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.

Tags: