ಬಿಜೆಪಿಗೆ ಸೇರದೇ ಹೋದ್ರೆ ಸಿಬಿಐ, ಇಡಿ ದಾಳಿ ಮಾಡಿ ಹೆದರಿಸೋಕೆ ಬಿಜೆಪಿ ಹೈಕಮಾಂಡ್ 55 ಕಾಂಗ್ರೆಸ್ ಶಾಸಕರ ಟಾರ್ಗೆಟ್ ಲಿಸ್ಟ್ ಮಾಡಿಕೊಂಡಿದೆ. ಅದರಲ್ಲಿ ನಾನೂ ಕೂಡ ಎಂದು ‘ಕೈ’ ಶಾಸಕ ವಿಜಯಾನಂದ ಕಾಶಪ್ಪನವರ್ ಹೊಸ ಬಾಂಬ್ ಸಿಡಿಸಿದ್ದಾರೆ.

ಈ ಬಗ್ಗೆ ಹುನಗುಂದದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರ ಬೆದರಿಕೆಗೆ ನಾನು ಹೆದರೋಲ್ಲ, ಬಗ್ಗೋದು ಇಲ್ಲ. ನನ್ನೇನು ಕಿತ್ಕೊಳ್ಳೋಕೆ ಆಗಲ್ಲ. ಬಿಜೆಪಿಯವರು ಒಮ್ಮೆಯಾದ್ರೂ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದಾರಾ? ಹಿಂಬಾಗಿಲಿನಿಂದ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಕಳೆದ ವರ್ಷ ನಮ್ಮ ಶಾಸಕರಿಗೆ ದುಡ್ಡು ಕೊಟ್ಟು ಅಧಿಕಾರಕ್ಕೆ ಬಂದಿದ್ದಾರೆ. ಬಹುಮತ ಇರಲಿಲ್ಲ. ಇದೆಲ್ಲಾ ಜನರಿಗೆ ಗೊತ್ತಿದೆ.
ಬಿಜೆಪಿಗರು ಯಾವುತ್ತೂ ಅಧಿಕಾರಕ್ಕೆ ಬರೋದಿಲ್ಲ. ಅದು ಅವರಿಗೆ ಗೊತ್ತಾಗಿದೆ. ಹಾಗಾಗಿ ಅವರು ಕುತಂತ್ರ ರಾಜಕಾರಣವನ್ನೇ ಮಾಡಬೇಕು ಇವತ್ತು ಕೂಡ ಅದೇ ತಂತ್ರವನ್ನ ಹೂಡುತ್ತಿದ್ದಾರೆ. ಯಾರನ್ನಾದ್ರೂ ಎತ್ತಿ ಕಟ್ಟಿ ಸರ್ಕಾರ ಬೀಳಿಸೋ ಪ್ರಯತ್ನ ಮಾಡೋದು, ಸಿಬಿಐ, ಇಡಿ ದಾಳಿಗಳನ್ನ ಹೆದರಿಸೋಕೆ ಎಲ್ಲವನ್ನೂ ಮಾಡ್ತಿದ್ದಾರೆ. ಕಾಂಗ್ರೆಸ್ ಶಾಸಕರು ಬಿಜೆಪಿಗೆ ಸೇರದೇ ಹೋದ್ರೆ ಇಡಿ, ಸಿಬಿಐ ದಾಳಿಯ ಮಾಡೋದಾಗಿ ಬೆರಿಸಲು ತಂತ್ರ ರೂಪಿಸಿತ್ತಿದ್ದಾರೆ.. ನಾನು ಅದಕ್ಕೆ ಭಯಪಟ್ಟಿಲ್ಲ, ಮೊನ್ನೆ ನೋಡಿರಬಹುದು. ನಮ್ಮ ಬಳ್ಳಾರಿ ಶಾಸಕರು, ಭರತ ರೆಡ್ಡಿ, ತುಕರಾಮ್, ನಾಗೇಂದ್ರ ಅವರ ಮೇಲೆ ಮಾಡಿದ್ರು. ಇವೆಲ್ಲ ಉದ್ದೇಶಪೂರ್ವಕ. ದ್ವೇಷದ ರಾಜಕಾರಣ, ಕುತಂತ್ರ ರಾಜಕಾರಣ ಅಂತಾರೆ ಎಂದು ಬಿಜೆಪಿಗರ ವಿರುದ್ಧ ವಾಗ್ದಾಳಿ ನಡೆಸಿದರು.
ಪಕ್ಷದ ರಾಜ್ಯಾಧ್ಯಕ್ಷರ ಸ್ಥಾನ ಬದಲಾವಣೆ ಇವೆಲ್ಲವೂ ಚರ್ಚೆಗಳೇ ಹೊರತು ಇವೇ ಅಂತಿಮವಲ್ಲ ಅವರವರ ಅನಿಸಿಕೆ (ಶಾಸಕ ಹುಸೇನ್) ಹೇಳೋದ್ರಲ್ಲಿ ತಪ್ಪೇನಿದೆ ನಾನು ಸಚಿವ ಸ್ಥಾನದ ಆಕಾಂಕ್ಷಿ. ಅದರಲ್ಲೇನು ಎರಡು ಮಾತಿಲ್ಲ ಕೊಟ್ಟರೆ ಸಮರ್ಥವಾಗಿ ನಿಭಾಯಸುವ ಶಕ್ತಿ ನನ್ನಲ್ಲಿದೆ ಯಾರದೋ ಹೊಟ್ಟೆ ಉರಿಸೋದಕ್ಕಾಗಿ ನಾನು ಸಚಿವ ಆಗೋಲ್ಲ ನಾನು ದ್ವೇಷದ ರಾಜಕಾರಣಿ ಅಲ್ಲ ನಾನು ದ್ವೇಷವನ್ನ ಬಹಳ ದಿನದ ಹಿಂದೇನೆ ಬಿಟ್ಟಿದ್ದೇನೆ50 ವರ್ಷಗಳಿಂದ ನಮ್ಮ ಕುಟುಂಬ ಕಾಂಗ್ರೆಸ್ ನಲ್ಲಿದೆ ಆ ನಿಟ್ಟಿನಲ್ಲಿ ಪಕ್ಷ ಸಚಿವ ಸ್ಥಾನ ಕೊಟ್ಟರೆ ಸಮರ್ಥವಾಗಿ ನಿಭಾಯಿಸುತ್ತೇನೆ ಎಂದರು.
ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ಮುಂಚೆ ಜನರಿಗೆ ನೀಡಿದ ಪಂಚ ಗ್ಯಾರಂಟಿ ಯೋಜನೆಗಳ ಭರವಸೆಗಳನ್ನು ನಾವು ಜಾರಿಗೊಳಿಸಿದ್ದೇವೆ ಯೋಜನೆಗಳು ಜನ ಪ್ರೀತಿಗೊಳ್ಳುತ್ತಿವೆ. ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಪ್ರತಿಯೊಂದು ಯೋಜನೆಗಳ ಕುರಿತು ಸಮುಗ್ರವಾಗಿ ಚರ್ಚಿಸಿ ಜನರಿಗೆ ತಲುಪಿಸುತ್ತಿದ್ದಾರೆಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
Recent Comments