Belagavi

ಉತ್ತಮ ಆರೋಗ್ಯಕ್ಕಾಗಿ ರಸಗೊಬ್ಬರ ಬಳಸಬೇಡಿ: ಎಚ್.ಡಿ.ಕೋಳೆಕರ

Share

ದೇಶದ ಜನತೆಯ ಹಸಿವು ನೀಗಿಸಲು1965ರಲ್ಲಿ ರಸಗೊಬ್ಬರ ಬಳಸಿ ಅಧಿಕ ಆಹಾರ ಧಾನ್ಯಗಳ ಉತ್ಪಾದನೆಗೆ ರೈತರಿಗೆ ವಿನಂತಿಸುತಿದ್ದ ಆಡಳಿತ ವರ್ಗ ಇಂದು ಭೂಮಿಯ ಉಳುವಿಗಾಗಿ ಉತ್ತಮ ಆರೋಗ್ಯಕ್ಕಾಗಿ ರಸಗೊಬ್ಬರ ಬಳಸಬೇಡಿ ಎಂದು ಕೈ ಮುಗಿದು ವಿನಂತಿಸುತಿದ್ದೆವೆ. ಇತಿಹಾಸ ಮರಕಳಿಸುತ್ತದೆ ಎನ್ನವದು ಅಕ್ಷರಶಃ ಸತ್ಯವಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಎಚ್.ಡಿ.ಕೋಳೆಕರ ಹೇಳಿದರು.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಚಾಮುಂಡೇಶ್ವರಿ ಆತ್ಮಾ ಸಂಘ, ಕೃಷಿ ಇಲಾಖೆಯ ನೈಸರ್ಗಿಕ ಕೃಷಿ ಅಭಿಯಾನ, ಕೃಷಿ ಸಂಶೋಧನಾ ಕೇಂದ್ರ ಮತ್ತಿಕೊಪ್ಪ ಹಾಗೂ ಸೆಲ್ಕೊ ಇಲೆಕ್ಟ್ರೀಕಲ್ ಟ್ಯಾಕ್ಟರ್ ಕಂಪನಿ ಸಂಯೊಗದಲ್ಲಿ ಜರುಗಿದ ಕನ್ನೇರಿಮಠದ ಕಾಡಸಿದ್ಧೇಶ್ವರ ಸ್ವಾಮೀಜಿ ನಡಿಸಿದ ಕಿಸಾನ ಗೋಷ್ಠಿಯ ವಾರ್ಷಿಕೊತ್ಸವದಲ್ಲಿ ಮಾತನಾಡಿ, ಇಂದು ಕೃಷಿ ಸಂಪೂರ್ಣವಾಗಿ ರಸಗೊಬ್ಬರ ಮೇಲೆ ಅವಲಿಂಬಿತವಾಗಿದ್ದು ಕಳೆದ ವರ್ಷಕ್ಕಿಂತ ಈ ವರ್ಷ ಜಿಲ್ಲೆ ಒಂದರಲ್ಲಿ 10ಸಾವಿರ ಮೆ.ಟನ್ ಹೆಚ್ಚುವರಿಯಾಗಿ ಯುರಿಯಾ ಗೊಬ್ಬರ ನೀಡಿದರು ಇನ್ನು ಬೇಡಿಕೆ ಹೆಚ್ಚುತ್ತಿದೆ ಈ ರೀತಿಯಾದರೆ ನಮ್ಮ ಕೈಯಾರೆ ನಾವೇ ಕೃಷಿ ಭೂಮಿಯನ್ನು ಬರಡು ಭೂಮಿಯಾಗಿಸುತ್ತೆವೆ.

150ಕೋಟಿಗೆ ಸಮಿಪಿಸುತ್ತಿರುವ ದೇಶದ ಜನಸಂಖ್ಯೆಗೆ ಆಹಾರ ಉತ್ಪಾದನೆ ನಮ್ಮ ಮುಂದಿರುವ ದೊಡ್ಡಸಾವಲಾಗಿದ್ದರು ಭೂಮಿಗೆ ಕೇವಲ ಯುರಿಯಾ ಮಾತ್ರ ಬಳಸದೆ ಅದರ ಜೋತೆ 17 ಪೋಷಕಾಂಶಗಳು, ಡಿ.ಎ.ಪಿ, ಪೋಟ್ಯಾಷ್ ಮತ್ತು ಕಾಂಪ್ಲೆಕ್ಸ್ ಗೊಬ್ಬರ ಮಿತವಾಗಿ ಬಳಸಿ ಅತಿಯಾಗಿ ಕೊಟ್ಟಿಗೆ ಗೊಬ್ಬರ ಹಾಕುವದರಿಂದ ಮಣ್ಣಿನ ಫಲವತ್ತತೆ ಹೆಚ್ಷುವದರೊಂದಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಇಳುವರಿ ಪಡೆದು ಕೃಷಿಯನ್ನು ಲಾಭದಾಯಕ ಮಾಡಬೇಕಾಗಿದೆ ಎಂದರು. ಸವದತ್ತಿಯ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಹಾಂತೇಶ ತೋಟಗಿ ಡಾ.ಎಸ್.ಎಮ್. ವಾರದ, ವಿ.ಎಮ್ ಹೊಸೂರ, ಮಧುಸೂಧನ ಅಮಠೆ ಮಾತನಾಡಿ, ಸಾವಯವ ಕೃಷಿ ಹಾಗೂ ಕೃಷಿಯಲ್ಲಿ ಆಧುನಿಕ‌ತಂತ್ರಜ್ಣಾನದ ಬಳಕೆ ಬಗ್ಗೆ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ನೂರಾರು ರೈತರಿಗೆ ಉಚಿತ ಸಸಿ ನೀಡಲಾಯಿತು. ಇಲೆಕ್ಟ್ರೀಕಲ್ ಟ್ಯಾಕ್ಟರ್ ಹಾಗೂ ದ್ರೋಣ ಪ್ರಾತೇಕ್ಷತೆಯನ್ನು ಮಾಡಲಾಯಿತು. ವೇದಿಕೆಯ ಮೇಲೆ ಸಲಿಂ ಸಂಗತ್ರಾಳ, ಗ್ರಾಪಂ ಉಪಾಧ್ಯಕ್ಷೆ ಸುವರ್ಣ ವಿವೇಕಿ, ಕಾರ್ತಿಕ್ ಪಾಟೀಲ, ಮಾಳಪ್ಪ ಮಮದಾಪೂರಿ, ಶಿವಾನಂದ ಕೌಜಲಗಿ, ರವಿ ಕುರಬೆಟ್ಟ ಎಟಿಎಂ ಶ್ವೇತಾ ಕೋಟಗಿ ಇದ್ದರು.

Tags: