Dharwad

ಯೋಗೇಶಗೌಡ ಕೊಲೆ ಪ್ರಕರಣ… ಜೀವ ಬೆದರಿಕೆ ಹಿನ್ನೆಲೆ ಕೊಲೆ ಆರೋಪಿ ನಿವಾಸಕ್ಕೆ ಸಿಆರ್‌ಪಿಎಫ್ ಭದ್ರತೆ

Share

ಧಾರವಾಡ ಜಿಲ್ಲಾ ಪಂಚಾಯತ ಸದಸ್ಯರಾಗಿದ್ದ ಹಾಗೂ ಬಿಜೆಪಿ ಮುಖಂಡ ಯೋಗೇಶಗೌಡ ಗೌಡರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಿಗೆ ನಿವಾಸಕ್ಕೆ ಸಿ ಆರ್ ಪಿ ಎಫ್ ಭದ್ರತೆ ನೀಡಲಾಗಿದ್ದು, ಆರೋಪಿ ತಪೊಪ್ಪಿಗೆ ಹಿನ್ನೆಲೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ‌.

ಎಸ್ ಕಳೆದ 2016 ಜೂನ್ 15 ರಂದು ಧಾರವಾಡ ಸಪ್ತಾಪುರ ಉದಯ ಜೀಮ್‌ನಲ್ಲಿ ಭೀಕರ್ ಹತ್ಯೆಯು ಧಾರವಾಡ ಜಿಲ್ಲೆಯನ್ನೇ ಬೆಚ್ಚಿ ಬಿಳಿಸಿತ್ತು. ಬಿಜೆಪಿ ಮುಖಂಡ ಹಾಗೂ ಧಾರವಾಡ ಜಿಲ್ಲಾ ಪಂಚಾಯತ ಸದಸ್ಯ ಯೋಗೇಶಗೌಡ ಗೌಡರ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಿಗೆ, ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 17ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಕಳೆದ ಶನಿವಾರ ತಪ್ಪೊಪ್ಪಿಗೆ ಅರ್ಜಿ ಸಲ್ಲಿಸಿ ತಮ್ಮ ಹೇಳಿಕೆ ದಾಖಲು ಮಾಡಿದರು. ಸಿಬಿಐ ಹಾಗೂ ಸರ್ಕಾರಿ ಪರ ವಕೀಲರ ಸಮ್ಮುಖದಲ್ಲಿ ಆರೋಪಿ ಮುತ್ತಿಗೆ ಹೇಳಿಕೆ ದಾಖಲಿಸಿದರು.

ತಪ್ಪೊಪ್ಪಿಗೆ ಹೇಳಿಕೆ ಹಿನ್ನೆಲೆಯಲ್ಲಿ ಆರೋಪಿ ಹಾಗೂ ಆರೋಪಿ ಕುಟುಂಬಸ್ಥರಿಗೆ ಸೂಕ್ತ ಕೇಂದ್ರ ತನಿಖಾ ಸಂಸ್ಥೆಯಿಂದ ಸೂಕ್ತ ಭದ್ರತೆಗೆ ನ್ಯಾಯಾಧೀಶರು ಸೂಚಿಸಿದ್ದರಂತೆ. ನ್ಯಾಯಾಧೀಶರ ಆದೇಶ ಮೇರೆಗೆ ಇಂದು ಸಿಆರ್‌ಪಿಎಫ್ ತಂಡ ಯೊಗೇಶಗೌಡ ಗೌಡರ ಕೊಲೆ ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಮುತ್ತಿಗಿ ನಿವಾಸಕ್ಕೆ ಭದ್ರತೆ ನೀಡಿದೆ. ಇನ್ನೂ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿ ವಿಚಾರಣೆ ನಡೆಯುತ್ತಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಪ್ರಮುಖ ಆರೋಪಿ ತಪ್ಪೊಪ್ಪಿಗೆ ಬೆನ್ನಲ್ಲೇ ವಿನಯ ಕುಲಕರ್ಣಿಯವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

Tags: