Belagavi

ಕಂಗ್ರಾಲ್ ಗಲ್ಲಿಯ ಡ್ರೈನೇಜ್ ಚೇಂಬರ್ ನಲ್ಲಿ 3 ತಿಂಗಳ ಹಸುಗೂಸು ಶಂಕೆ ?

Share

ಬೆಳಗಾವಿಯ ಕಂಗ್ರಾಲ್ ಗಲ್ಲಿಯ ಡ್ರೈನೇಜ್ ಚೇಂಬರ್ ನಲ್ಲಿ 3 ತಿಂಗಳ ಮಗು ಪತ್ತೆಯಾಗಿದ್ದು ಸಂಚಲನ ಮೂಡಿಸಿದೆ


ಹೌದು, ಬೆಳಗಾವಿಯ ಕಂಗ್ರಾಲ್ ಗಲ್ಲಿಯಲ್ಲಿ ಒಳಚರಂಡಿ ಕಾಲುವೆ ಒಡೆದು ಹೋಗಿರುವ ದೂರಿನ ಮೇರೆಗೆ ಪಾಲಿಕೆಯ ನೈರ್ಮಲ್ಯ ಕಾರ್ಯಕರ್ತರು ಅಲ್ಲಿಗೆ ತೆರಳಿದಾಗ ಸುಮಾರು 3 ತಿಂಗಳ ಮಗು ಪತ್ತೆಯಾಗಿದೆ. ಕೂಡಲೇ ಸ್ಥಳೀಯ ಕಾರ್ಪೊರೇಟರ್ ಶಂಕರ ಪಾಟೀಲ ಹಾಗೂ ನಿವಾಸಿಗಳಿಗೆ ಮಾಹಿತಿ ನೀಡಿದರು. ನೀರು ಹರಿಸುವ ಮೂಲಕ ಡ್ರೈನೇಜ್ ಚೇಂಬರ್ ಅನ್ನು ಸ್ವಚ್ಛಗೊಳಿಸುತ್ತಿದ್ದಾಗ ಪೈಪ್‌ನಲ್ಲಿ ಶಿಶು ಸಿಲುಕಿಕೊಂಡಿದೆ ಎಂದು ಕ್ಲೀನರ್‌ಗಳು ತಿಳಿಸಿದ್ದಾರೆ

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸಫಾಯಿ ಕರ್ಮ ಸುರೇಶ್, ಡ್ರೈನೇಜ್ ಚೇಂಬರ್ ತಡೆದಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಸ್ವಚ್ಛಗೊಳಿಸಲು ಆರಂಭಿಸಿದ್ದೇವು. ಎಲ್ಲಾ ಕೋಣೆಗಳನ್ನು ಸ್ವಚ್ಛಗೊಳಿಸಿದವು. ಆ ಸಮಯದಲ್ಲಿ ಮಧ್ಯದ ಕೊಠಡಿಯಲ್ಲಿ ಗೊಂಬೆಯಂತಿದ ವಸ್ತು ಪತ್ತೆಯಾಯಿತು. ಹಾಗಾಗಿ ಸುತ್ತಮುತ್ತಲಿನ ಮನೆಗಳ ಹೆಂಗಸರನ್ನು ಕರೆಸಲಾಯಿತು. ಎಲ್ಲಾ ಮೂರು ಕೋಣೆಗಳಲ್ಲಿ ನೀರನ್ನು ಸುರಿಯಲಾಯಿತು,.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಸ್ಥಳೀಯ ಕಾರ್ಪೊರೇಟರ್ ಶಂಕರ ಪಾಟೀಲ, ಕಂಗ್ರಾಲ್ ಗಲ್ಲಿಯಲ್ಲಿ ಡ್ರೈನೇಜ್ ಚೇಂಬರ್ ಕೆಟ್ಟು ಹೋಗಿವೆ ಎಂಬ ದೂರಿನ ಹಿನ್ನೆಲೆಯಲ್ಲಿ ಕಾರ್ಮಿಕರನ್ನು ಕಳುಹಿಸಲಾಯಿತು. ಅವರು ಒಳಚರಂಡಿ ಮಾರ್ಗವನ್ನು ಸ್ವಚ್ಛಗೊಳಿಸಲುವ ವೇಳೆ. ಶಿಶು ಕಾಣಿಸಿಕೊಂಡಿದೆ ಎಂದರು. ಮೊದಲ ಬಾರಿಗೆ ಈ ಅನುಭವವನ್ನು ಹೊಂದಿರುವುದರಿಂದ ಮುಂದೆ ಏನು ಮಾಡಬೇಕೆಂದು ನಮಗೆ ತಿಳಿದಿಲ್ಲ. ಹಾಗಾಗಿ ಪಾಲಿಕೆ ಆರೋಗ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ವೇವು. ಅವರು ಬಂದ ನಂತರ ಮುಂದೇನು ಮಾಡಬೇಕೆಂದು ನಿರ್ಧರಿಸುತ್ತಾರೆ ಎಂದರು.

ಈ ಮಧ್ಯೆ, ಕಂಗ್ರಾಲ್ ಗಲ್ಲಿಯ ಜನನಿಬಿಡ ರಸ್ತೆಯಲ್ಲಿ ಈ ರೀತಿಯ ಘಟನೆ ನಡೆದ ನಂತರ ಕೋಲಾಹಲ ಉಂಟಾಗಿದೆ. ಸಂಬಂಧಪಟ್ಟ ಶಿಶುವನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಬಳಿಕವಷ್ಟೇ ಇದು ಶಿಶುವೇ ಅಥವಾ ಭ್ರೂಣವೇ ಎಂಬುದು ಸ್ಪಷ್ಟವಾಗುತ್ತದೆ.

Tags: