Chikkodi

ಕೆಎಲ್‌ಇ ಸಂಸ್ಥೆಯನ್ನು ಉತ್ತುಂಗ ಶಿಖರಕ್ಕೆ ಏರಿಸುವಲ್ಲಿ ಡಾ. ಪ್ರಭಾಕರ ಕೋರೆ ಕಾರ್ಯ ಶ್ಲಾಘನೀಯ: ನಿಡಸೋಶಿ ಶ್ರೀಗಳು

Share

ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿದು, ಆರೋಗ್ಯ, ಶಿಕ್ಷಣ, ಸಹಕಾರಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ, ಗ್ರಾಮೀಣ ಭಾಗದ
ಬಡ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಕೆಎಲ್‌ಇ ಸಂಸ್ಥೆಯನ್ನು ಉತ್ತುಂಗ ಶಿಖರಕ್ಕೆ ಏರಿಸುವಲ್ಲಿ ಡಾ. ಪ್ರಭಾಕರ ಕೋರೆ ಅವರ ಕಾರ್ಯ ನಿಜಕ್ಕೂ ಅಮೂಲ್ಯವಾಗಿದೆ ಎಂದು ನೀಡಸೋಶಿ ಸಿದ್ದ ಸಂಸ್ಥಾನ ಮಠದ ಪ.ಪೂ. ಶ್ರೀ ಪಂಚಮ ಶಿವಲಿಂಗೇಶ್ವರ ಶ್ರೀಗಳು ಹೇಳಿದರು.

ಅವರು ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ಡಾ. ಪ್ರಭಾಕರ್ ಕೋರೆಯವರ 76ನೇ ಹುಟ್ಟು ಹಬ್ಬದ ಪ್ರಯುಕ್ತ ಏರ್ಪಡಿಸಲಾಗಿದ್ದ ವನಮಹೋತ್ಸವ, ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ರಕ್ತದಾನ ಶಿಬಿರವನ್ನು ಉದ್ಘಾಟಿಸಿ, ಆಶೀರ್ವಚನ ನೀಡುತ್ತ ಮಾತನಾಡುತ್ತಿದ್ದರು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನ ಶ್ರೀಗಳು, ಚಿಂಚಣಿ ಸಿದ್ಧಸಂಸ್ಥಾನ ಮಠದ ಶ್ರೀ ಅಲ್ಲಮಪ್ರಭು ಶ್ರೀಗಳು, ಅಂಕಲಗಿ ಅಡವಿ ಸಿದ್ದೇಶ್ವರ ಸಿದ್ದಸಂಸ್ಥಾನ ಮಠದ ಶ್ರೀ ಅಮರ ಸಿದ್ದೇಶ್ವರ ಶ್ರೀಗಳು ವಹಿಸಿ, ಆಶೀರ್ವಚನ ನೀಡಿದರು. ವಿಧಾನ ಪರಿಷತ್ತಿನ ಮಾಜಿ ಸದಸ್ಯರಾದ ಮಹಾಂತೇಶ ಕವಟಿಗಿಮಠ, ಶಿರೋಳ ದತ್ತ ಸಕ್ಕರೆ ಕಾರ್ಖಾನೆಯ ಅಧ್ಯಕ್ಷರಾದ ಗಣಪತರಾವ ಪಾಟೀಲ, ಶಾಸಕರಾದ ದುರ್ಯೋಧನ ಐಹೊಳೆ, ರಾಜು ಕಾಗೆ, ಕೆಎಲ್‌ಇ ಸಂಸ್ಥೆಯ ಉಪಕುಲಪತಿ ಡಾ. ನಿತೀನ ಗಂಗಾಣಿ, ಮಾತನಾಡಿ, ಡಾ. ಕೋರೆ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.

ಈ ವೇಳೆ ಶಾಸಕರಾದ ಗಣೇಶ ಹುಕ್ಕೇರಿ, ಹುಟ್ಟುಹಬ್ಬ ಆಚರಣಾ ಸಮಿತಿಯ ಅಧ್ಯಕ್ಷರಾದ ಬಿ.ಆರ್. ಪಾಟೀಲ್, ಸಿಬಿಕೆಎಸ್‌ಎಸ್‌ಕೆಯ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಕೋರೆ, ಉಪಾಧ್ಯಕ್ಷರಾದ ತಾತ್ಯಾಸಾಬ ಕಾಟೆ, ಹುಟ್ಟು ಹಬ್ಬ ಆಚರಣೆ ಸಮಿತಿಯ ಕಾರ್ಯದರ್ಶಿಗಳಾದ ಭರತೇಶ ಬನಾವಣೆ, ವ್ಹಿ.ಡಿ. ಪಾಟೀಲ್, ಡಾ. ಕರ್ನಲ್ ಎಂ.ದಯಾನಂದ, ಡಾ. ವ್ಹಿ.ಎ. ಕೋಠಿವಾಲೆ, ಡಾ. ಎಂ.ವ್ಹಿ. ಜಾಲಿ, ಪ್ರಾ. ಎನ್.ಎಸ್. ಮಾಹಂತಶೆಟ್ಟಿ, ಶ್ರೀಕಾಂತ್ ವೀರಗಿ, ದತ್ತ ಕಾರ್ಖಾನೆ ನಿರ್ದೇಶಕ ಅಮರ ಯಾದವ್, ಅರುಣ್ ದೇಸಾಯಿ, ಮಹೇಂದ್ರ ಬಾಗಿ ವೇದಿಕೆಯ ಮೇಲೆ ಹಾಜರಿದ್ದರು. ಆಗಮಿಸಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದಕ್ಕೂ ಮೊದಲು ರಕ್ತದಾನ ಶಿಬಿರ, ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಮತ್ತು ವನ ಮಹೋತ್ಸವವನ್ನು ಸಸಿ ನೆಡುವ ಮೂಲಕ ಗಣ್ಯರು ನೆರವೇರಿಸಿದರು. ಉಚಿತ ಆರೋಗ್ಯ

ತಪಾಸಣಾ ಶಿಬಿರದಲ್ಲಿ ಸುಮಾರು 5000 ಕ್ಕಿಂತ ಹೆಚ್ಚು ರೋಗಿಗಳು ತಪಾಸನೆ ಮಾಡಿಸಿಕೊಂಡರು. ರಕ್ತದಾನ ಶಿಬಿರದಲ್ಲಿ ಸುಮಾರು 400ಕ್ಕೂ ಅಧಿಕ ರಕ್ತದಾನಿಗಳು ರಕ್ತದಾನ ಮಾಡಿದರು. ಇದೇ ವೇಳೆ ಹಿರಿಯ ಪತ್ರಕರ್ತರಾದ ಸುಭಾಷ್ ದಲಾಲ್, ವಿರುಪಾಕ್ಷಿ ಕವಟಗಿ, ಸುಧೀರ್ ಕುಂಭೋಜಕರ ಮತ್ತು ಸಂತೋಷಕುಮಾರ್ ಕಾಮತ್ ಅವರನ್ನು ಸತ್ಮರಿಸಲಾಯಿತು. ಸಮಾರಂಭದಲ್ಲಿ ಸಿಬಿಕೆಎಸ್‌ಎಸ್‌ಕೆ ನಿರ್ದೇಶಕರಾದ ಅಣ್ಣಾಸಾಹೇಬ ಪಾಟೀಲ, ನಂದಕುಮಾರ್ ನಾಶಿಪುಡಿ, ಮಹಾವೀರ ಕಾತ್ರಾಳೆ, ಮಹಾವೀರ ಮಿರ್ಜಿ, ಮಲ್ಲಪ್ಪ ಮೈಶಾಳೆ, ಅನ್ನಾಸಾಹೇಬ ಇಂಗಳೆ, ಚೇತನ ಪಾಟೀಲ, ಸಂದೀಪ ಪಾಟೀ¯, ಭರಮಗೌಡ ಪಾಟೀಲ, ವ್ಯವಸ್ಥಾಪಕ ನಿರ್ದೇಶಕ ರಮೇಶ ದೇಸಾಯಿ, ಡಾ.ಕೋರೆ ಕ್ರೆಡಿಟ್‌ನ ಅಧ್ಯಕ್ಷರಾದ ಮಹಾಂತೇಶ ಪಾಟೀಲ, ಉಪಾಧ್ಯಕ್ಷರಾದ ಸಿದ್ಧಗೌಡ ಮಗದುಮ್ಮ, ನಿರ್ದೇಶಕರಾದ ಅಣ್ಣಪ್ಪ ಸಂಕೇಶ್ವರಿ, ಪಿಂಟು ಹಿರೇಕುರುಬರ,

ಅನೀಲ ಪಾಟೀ¯, ಅಶೋಕ ಚೌಗಲಾ, ಪ್ರಫುಲ್ಲ ಶೆಟ್ಟಿ, ಶ್ರೀಕಾಂತ ಉಮರಾಣೆ, ಪ್ರಸಾದ ಮೇದಾರ, ಅಂಕಲಿ ಗ್ರಾ.ಪಂ. ಅಧ್ಯಕ್ಷರಾದ ಅಜೀತ ಉಮರಾಣಿ ಹಾಗೂ ಶಿವಶಕ್ತಿ ಶುಗರ್ ಸಕ್ಕರೆ ಕಾರ್ಖಾನೆ, ಚಿದಾನಂದ ಕೋರೆ ಸಹಕಾರಿ ಸಕ್ಕರೆ ಕಾರ್ಖಾನೆಯ ಅಧಿಕಾರಿಗಳು, ಕಾರ್ಮಿಕ ವರ್ಗದವರು, ಪ್ರಭಾಕರ ಕೋರೆ ಇವರ ಅಭಿಮಾನಿ ಬಳಗ ಹಾಜರಿದ್ದರು. ಡಾ. ಕೋರೆ ಕ್ರೆಡಿಟ್‌ನ ವ್ಯವಸ್ಥಾಪಕ ನಿರ್ದೇಶಕರಾದ ದೇವೇಂದ್ರ ಕರೋಶಿ ಪ್ರಾಸ್ತಾವಿಕವಾಗಿ ಮಾತನಾಡಿ. ಸ್ವಾಗತಿಸಿದರು. ಮಹೇಶ್ ಗುರಣಗೌಡರ ನಿರೂಪಿಸಿದರು. ಕಾರ್ಮಿಕ ಅಧಿಕಾರಿಯಾದ ಶಿವಾನಂದ್ ಹಕಾರೆ ವಂದಿಸಿದರು.

Tags: