0water problems

ಮಹಾರಾಷ್ಟ್ರದ ರಾಜಾಪೂರ ಬ್ಯಾರೇಜನಿಂದ ಕೃಷ್ಣಾನದಿಗೆ 1,400 ಕ್ಯೂಸೆಕ ನಷ್ಟು ನೀರು ಬಿಡುಗಡೆ

Share

ಮಹಾರಾಷ್ಟ್ರದ ರಾಜಾಪುರ ಬ್ಯಾರೇಜ್ ನಿಂದ 1,400 ಕ್ಯುಸೆಕ್‌ ನೀರನ್ನು ಕೃಷ್ಣಾ ನದಿಗೆ ಹರಿ ಬಿಡಲಾಗಿದೆ.ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ,ಯಡೂರ ಮಾಂಜರಿ,ಇಂಗಳಿ ಗ್ರಾಮದ ನದಿಗಳ ದಾಟಿ ಮುಂದಕ್ಕೆ ಸಾಗುತ್ತಿದೆ.

ರಾಜಾಪುರ ಬ್ಯಾರೇಜ್‌ನಲ್ಲಿ ಮಳೆ ನೀರು ಸಂಗ್ರಹವಾಗಿಲ್ಲ. ಬ್ಯಾರೇಜ್‌ ಗೇಟ್‌ಗಳನ್ನು ತೆರೆದು ಹಿನ್ನೀರು ಮಾತ್ರ ಬಿಡುಗಡೆ ಮಾಡಲಾಗುತ್ತಿದೆ ಎಂದು ತಾಲ್ಲೂಕು ಆಡಳಿತ ತಿಳಿಸಿದೆ. ಅಥಣಿ ತಾಲ್ಲೂಕಿನ ಜೂಗೂಳ, ಮಂಗಾವತಿ, ತಾಲ್ಲೂಕಿನ ಚಂದೂರ, ಚಂದ್ರರಟೇಕ್, ಯಡೂರ, ಕಲ್ಲೋಳ, ಅಂಕಲಿ, ಮಾಂಜರಿ ಗ್ರಾಮಗಳ ನದಿ ದಂಡೆಯ ರೈತರಿಗೆ ಅನುಕೂಲವಾಗಲಿದೆ.
ತಾಲ್ಲೂಕಿನಲ್ಲಿ ಸಂಪೂರ್ಣವಾಗಿ ಬತ್ತಿ ಬರಡಾಗಿದ್ದ ಕೃಷ್ಣಾ ನದಿಯಲ್ಲಿ ಕೊಂಚ ನೀರು ಹರಿದು ಬರುತ್ತಿರುವುದರಿಂದಲೂ ರೈತರು ಸಂತಸಗೊಂಡಿದ್ದಾರೆ. ಕನಿಷ್ಠ ಜಾನುವಾರುಗಳಿಗಾದರೂ ನೀರಿನ ಸಮಸ್ಯೆ ನಿಗಲಿದೆ. ಮಹಾರಾಷ್ಟ್ರ ಸರ್ಕಾರ ಇನ್ನೂ ಹೆಚ್ಚಿನ ನೀರು ಬಿಡುಗಡೆ ಮಾಡಿಬೇಕು ಎಂದು ರೈತರು ಆಗ್ರಹಿಸುತ್ತಾರೆ.

Tags: