DEVELOPMENT WORK

ಹತ್ತು ಲಕ್ಷಕ್ಕೂ ಹೆಚ್ಚಿನ ಮೌಲ್ಯದ ಸಾಮಗ್ರಿಗಳು ಮಾಯ: ಸರ್ಕಾರಿ ಆಸ್ತಿಗೆ ಕಿಂಚಿತ್ತೂ ಭದ್ರತೆಯೇ ಇಲ್ಲ..!

Share

ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸರ್ಕಾರಿ ಆಸ್ತಿಗಳಿಗೆ ಸರ್ಕಾರಿ ಸ್ವಾಮ್ಯದ ಸಂಪತ್ತಿಗೆ ಭದ್ರತೆಯೇ ಇಲ್ಲದಂತಾಗಿದೆ. ಪಾಲಿಕೆಯ ಆಸ್ತಿಯಲ್ಲಿ ಯಾರೋ ಮನೆ ಕಟ್ಟುತ್ತಾರೆ. ಇನ್ಯಾವುದೋ ಜಾಗದಲ್ಲಿ ಅಭಿವೃದ್ಧಿ ಪಡಿಸಿದ ವಸ್ತುಗಳನ್ನೇ ಹಾಡ ಹಗಲೇ ಕಳ್ಳತನ ಮಾಡುತ್ತಾರೆ. ಅದರೂ ಮಹಾನಗರ ಪಾಲಿಕೆ ಮತ್ತು ಸ್ಟಾರ್ಟ್‌ಸಿಟಿ ಅಧಿಕಾರಿಗಳು ನಮಗೇನೂ ಸಂಬಂಧವಿಲ್ಲ. ಎನ್ನುವಂತೆ ಜಾಣಮೌನಕ್ಕೆ ಶರಣಾಗಿದ್ದಾರೆ. ಹಾಗಿದ್ದರೇ ಏನಿದು ಸ್ಟೋರಿ ಅಂತೀರಾ ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೈಲ್ಸ್..

ವಾಣಿಜ್ಯನಗರಿ ಹುಬ್ಬಳ್ಳಿಯ ಗೋಕುಲ ರಸ್ತೆಯ ರಾಜನಾಲಾಗೆ ಹೊಂದಿಕೊಂಡ ಪಾಲಿಕೆಯ ಜಾಗದಲ್ಲಿ ಬೀದಿಬದಿ ವ್ಯಾಪಾರಸ್ಥರ ಸಲುವಾಗಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣಕ್ಕೆ ಬಳಸಿದ ಲಕ್ಷಾಂತರ ಮೌಲ್ಯದ ವಸ್ತುಗಳು ಮಾಯವಾಗಿರುವುದು ಕಂಡು ಬರುತ್ತಿದೆ. ಹೌದು.. ತಾತ್ಕಾಲಿಕ ಮಾರುಕಟ್ಟೆಯನ್ನು ನಾಲಾದಿಂದ ಮರೆಮಾಚಲು ತಗಡಿನ ಇತರೆಡೆಗಳಲ್ಲಿ ಸ್ಟಾಲ್‌ಗಳಿಗೆ ನೂರಾರು ಶೀಟುಗಳು ಹಾಗೂ ಕಬ್ಬಿಣದ ವಸ್ತುಗಳು ಸೇರಿದಂತೆ ಹಲವಾರು ಬಗೆಯ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಸ್ಮಾರ್ಟ್ ಸಿಟಿ ಯೋಜನೆಯಡಿ ಅಳವಡಿಸಲಾಗಿತ್ತು, 2020 ಕಾಣಸಿಗುತ್ತಿದ್ದ ಈ ವಸ್ತುಗಳು ಕಳೆದ 15-20 ದಿನಗಳಲ್ಲಿ ಮಾಯವಾಗಿವೆ. ಇವುಗಳನ್ನು ಕಳ್ಳತನ ಮಾಡಲಾಗಿದೆ ಎಂಬ ಮಾತುಗಳೂ ಪಾಲಿಕೆಯಲ್ಲಿ ಕೇಳಿ ಬರುತ್ತಿವೆ.

ಇನ್ನೂ ಪಾಲಿಕೆ ಸಿಬ್ಬಂದಿ ಪ್ರಕಾರ 10 ಲಕ್ಷಕ್ಕೂ ಹೆಚ್ಚು ಮೌಲ್ಯದ ಬಾಳುವ ವಸ್ತುಗಳು ಕಳತನವಾಗಿವೆ ಎಂದು ಅಂದಾಜಿಸಲಾಗಿದೆ. ಸದ್ಯ ನಾಲಾವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಾರುಕಟ್ಟೆಯ ಜಾಗದಲ್ಲಿ ಮಣ್ಣಿನ ಗುಡ್ಡೆ ಹಾಕಿರುವುದು ಕಂಡು ಬಂದಿದೆ. 2020ರ ನವೆಂಬರ್ ತಿಂಗಳಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ 18 ಕೋಟಿ ರೂ. ವೆಚ್ಚದಲ್ಲಿ ಜನತಾ ಬಜಾರ ಅನ್ನು ಸ್ಮಾರ್ಟ್ ಮಾರುಕಟ್ಟೆಯನ್ನಾಗಿಸುವ ಹಿನ್ನೆಲೆಯಲ್ಲಿ ಅಲ್ಲಿನ ವ್ಯಾಪಾರಸ್ಥರನ್ನು ತೆರವು ಗೊಳಿಸಲಾಗಿತ್ತು. ಪರ್ಯಾಯ ವ್ಯವಸ್ಥೆ ಮಾಡುವ ಹಿನ್ನೆಲೆ ಹೊಸೂರಿನ ಬಳಿಯಲ್ಲಿ ವ್ಯವಸ್ಥೆ ಮಾಡಿದ್ದು, ಈಗ ಏಕಾಏಕಿ ಮಾಯವಾಗಿದ್ದು, ಕಳ್ಳತನದ ವಾಸನೆ ಬಡೆಯುತ್ತಿದೆ.

ಒಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಸರ್ಕಾರಿ ಹಾಗೂ ಸಾರ್ವಜನಿಕ ಆಸ್ತಿಗೆ ಕಿಂಚಿತ್ತೂ ಭದ್ರತೆಯೇ ಇಲ್ಲವಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಏನೇ ಮಾಡಿದರೂ ನಡೆಯುತ್ತದೇ ಎಂಬುವಂತ ಕೆಲವು ಮನಸ್ಥಿತಿಗಳ ಕೈವಾಡದಿಂದ ಇಂತಹ ಘಟನೆಗಳು ಮರುಕಳಿಸುತ್ತಿವೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಗಳನ್ನು ಜರುಗಿಸುವ ಕಾರ್ಯ ಆಗಬೇಕಿದೆ.

Tags: