ಧಾರವಾಡ: ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದ ವಿಧಾನಪರಿಷತ್ ಸದಸ್ಯ ಬೋಜೆಗೌಡ ಅವರಿಗೆ ಜೋಶಿ ಪರ ವಕೀಲರು ನೋಟಿಸ್ ಜಾರಿ ಮಾಡಿದ್ದಾರೆ.ಭಾರತೀಯ ವೈದ್ಯಕೀಯ ಮಂಡಳಿಗೆ ನೇಮಕಾತಿ ವಿಚಾರದಲ್ಲಿ 2 ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಬೋಜೆಗೌಡ ಅವರು ಆರೋಪ ಮಾಡಿದ್ದರು. ಇವರು ಆರೋಪ ಮಾಡಿದ ಮೇಲೆ ಇದಕ್ಕೆ ಸಂಬಂಧಿಸಿದಂತೆ ಜೋಶಿ ಅವರು ಪ್ರತಿಕ್ರಿಯೆ ಕೊಟ್ಟು ಇದು ಆಧಾರ ರಹಿತ ಆರೋಪ ಎಂದು ಪ್ರತಿಕ್ರಿಯೆ ಕೊಟ್ಟಿದ್ದರು.
ಅಲ್ಲದೇ ಅವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ಎಂದೂ ಹೇಳಿದ್ದರು. ಇದೀಗ ಕೇಂದ್ರ ಸಚಿವ ಜೋಶಿ ಅವರ ಕೋರಿಕೆ ಮೇರೆಗೆ ಬೋಜೆಗೌಡರಿಗೆ ನೋಟಿಸ್ ನೀಡಲಾಗಿದೆ ಎಂದು ಜೋಶಿ ಪರ ವಕೀಲರಾದ ಅರುಣ ಜೋಶಿ ತಿಳಿಸಿದ್ದಾರೆ.40 ವರ್ಷಗಳಿಂದ ಸಾಮಾಜಿಕ ಸೇವೆ ಹಾಗೂ ರಾಜಕೀಯದಲ್ಲಿ ಇರುವ ಜೋಶಿ ಅವರ ಮೇಲೆ ಬೋಜೆಗೌಡರು ಆಧಾರ ರಹಿತ ಆರೋಪ ಮಾಡಿದ್ದಾರೆ.
ನೋಟಿಸ್ ಕೊಟ್ಟ 7 ದಿನಗಳಲ್ಲಿ ಬೋಜೆಗೌಡ ಅವರು ಸಾರ್ವಜನಿಕ ಹೇಳಿಕೆ ನೀಡದೇ ಇದ್ದರೆ ಜೋಶಿ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಿದ್ದಾರೆ. ಹೀಗಾಗಿ ಬೋಜೆಗೌಡರ ಚಿಕ್ಕಮಗಳೂರು ಮನೆ ವಿಳಾಸಕ್ಕೆ ನೋಟಿಸ ಕಳುಹಿಸಲಾಗಿದೆ. ಈ ರೀತಿಯ ಚಾರಿತ್ರ್ಯ ಹೀನ ಮಾಡುವ ಹೇಳಿಕೆಯನ್ನು ವಾಪಸ್ ಪಡೆಯಬೇಕು ಎಂದು ಅರುಣ ಜೋಶಿ ಹೇಳಿದರು.


Recent Comments