ಬಿಜೆಪಿಯವರಿಗೆ ಮಾತನಾಡುವ ಶಕ್ತಿಯಿದೆ ಆದರೇ ಮಕ್ಕಳನ್ನು ಹುಟ್ಟಿಸುವ ಶಕ್ತಿಯಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಕಟುವಾಗಿ ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದರು.
ಅವರು ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಮಾತನಾಡಿದರು. ಇಂದು ನಾಳೆ ಬೆಳಗಾವಿ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡ್ತಿವಿ, ಜೆಡಿಎಸ ಪಕ್ಷ ರಾಷ್ಟ್ರೀಯ ಪಕ್ಷವಲ್ಲ. ನಾನು ಕರೆದುಕೊಂಡು ಬಂದ ಜನರಿಗೆ ಭಾಷಣ ಮಾಡಲ್ಲ. ಬಂದ ಜನರಿಗೆ ಭಾಷಣ ಮಾಡುವ ಉದ್ದೇಶ ಹೊಂದಿದ್ದೇವೆ. ೨೦೨೩ರಲ್ಲಿ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿ ಆಗ್ತಾರೆ. ದೇಶದ ಪ್ರಧಾನಮಂತ್ರಿ ಆಗಿದ್ದ ದೇವೇಗೌಡರು, ಅವರ ಜೀವಿತ ಅವಧಿಯಲ್ಲಿ ರೈತ ಕಲ್ಯಾಣ ಮಾಡುವ ಗುರಿ ಹೊಂದಿದ್ದೇವೆ. ಜೆಡಿಎಸ ಪಂಚಾಯತಿ ಹಂತದಲ್ಲಿ ಉಚಿತವಾಗಿ ಶಿಕ್ಷಣ,ಆರೋಗ್ಯ, ವಸತಿ, ನೀರಾವರಿ ಯೋಜನೆ ಅನುಷ್ಠಾನ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತು ಕೊಟ್ಟಿದ್ದೇವೆ ಎಂದರು.
ಬಿಜೆಪಿ, ಕಾಂಗ್ರೆಸ್ ವಿರುದ್ಧ ಇಬ್ರಾಹಿಂ ವಾಗ್ದಾಳಿ, ೪೦ ಫರ್ಸೆಂಟೆಜ್ ಇವರು, ೨೦ ಫರ್ಸೆಂಟೆಜ್ ಅವರದ್ದು. ರಾಹುಲ್ ಗಾಂಧಿ ಬಂದರು ಹೋದ್ರು ಸಂದೇಶ ಏನು ಕೊಟ್ಟರು ಎಂದು ಪ್ರಶ್ನಿಸಿದ್ದಕ್ಕೆ ಪ್ರತಿಕ್ರಿಯಿಸಿದ ಅವರು ಜೆಡಿಎಸ ಟಿಕೆಟ್ ಪಡೆಯಲು ದುಡ್ಡು ಇಲ್ಲಾ, ಹೈಕಮಾಂಡ ಇಲ್ಲಾ. ಜಿಲ್ಲೆಯ ನಾಯಕರೇ ತೀರ್ಮಾನ ಮಾಡ್ತಾರೆ. ಇವತ್ತು ಕುಮಾರಸ್ವಾಮಿ ಅವರನ್ನ ಸಿಎಂ ಆಗುವಂತೆ ಮನೆಗೆ ಹೋದವರು ಇವರೇ. ಅವರನ್ನ ಸಿಎಂ ಸ್ಥಾನದಿಂದ ಕೆಳಗೆ ಇಳಿಸಿದವರು ಇವರೇ ತಾನೇ ಎಂದು ಪರೋಕ್ಷವಾಗಿ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ರಾಹುಲ್ ಗಾಂಧಿಯವರಿಗೆ ಹೇಳ್ತಿನಿ ಸಿದ್ದರಾಮಯ್ಯ ಶಿವಕುಮಾರ ಅವರನ್ನ ಜೋಡೋ ಮಾಡಿ ಎಸ.ಆರ್.ಪಾಟೀಲ್ ಫೋಡೋ ಮಾಡಿ ಎಂದು ವ್ಯಂಗ್ಯವಾಡಿದವರು. ಸಿದ್ದರಾಮಯ್ಯ ಅವರನ್ನು ಟಿಕೆಟ್ ಕೊಡಿಸಲು ಕರೆ ತಂದವನು ನಾನೇ ಎಂದರು.
ಬೆಳಗಾವಿ ಜಿಲ್ಲೆಯ ೧೮ ಮತಕ್ಷೇತ್ರದಲ್ಲಿ ಜೆಡಿಎಸ ಅಭ್ಯರ್ಥಿ ಕಣಕ್ಕೆ ಇಳಿಸುತ್ತೇವೆ ಎಂದ ಅವರು ವಿಜಯಪುರ ಜೆಡಿಎಸ ಶಾಸಕ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತಾನಾಡಿ, ಬಿಜೆಪಿಯವರು ಹೇಳುತ್ತಿದ್ದರು ಅವರಿಗೆ ಗಂಡು ಮಕ್ಕಳನ್ನು ಹುಟ್ಟುಸುವ ಶಕ್ತಿಯಿದೆ ಅಂತಾ ಹೇಳಿ. ಆ ನಮ್ಮ ಮಕ್ಕಳಿಗೆ ಮಕ್ಕಳು ಹುಟ್ಟಿಸುವ ಶಕ್ತಿ ಇಲ್ಲಾ ಅಂತಾ ಹೇಳಿ ನಾವು ಹುಟ್ಟಿಸಿದ ಮಕ್ಕಳನ್ನ ತಗೊಂಡು ಹೋಗ್ತಾರಲ್ಲ ಎಂತಾ ಇವರೆಂಥ ಗಂಡಸರು. ಬಿಜೆಪಿಯವರು ಬೀಜ ಇಲ್ಲದವರು,ಇನ್ನೂಬ್ಬರ ಬೀಜ ತಗೊಂಡು, ನಮ್ಮ ಬೀಜ ಹಾಕ್ತಿರಾ ನಾಚೀಕೆ ಆಗಲ್ವಾ. ಇದೇನಾ ನಿಮಗೆ ಮೋದಿ ಕಲಿಸಿರುವುದು. ಅವರು ನೂರು ಜನಾ ಇದ್ದಾರೆ ನೀವು ಒಬ್ಬರು ಏನ್ ಮಾಡ್ತಿರಿ ಅಂತಾ ಕೇಳಿದ್ರು. ನಾ ಹೇಳ್ದೆ ನಾವು ರೈತರು ೫೦ ಆಕಳ ಕಟ್ಟಿದ್ರೆ ಹೋರಿ ಒಂದೇ ಕಟ್ಟೋದು. ೫೦ ಹೋರಿ ಕಟ್ಟಲ್ಲ ಒಂದೇ ಸಾಕು ನಮಗೆ ಅಂತಾ ಹೇಳಿದೆ. ಇವತ್ತು ಜನತಾ ದಳ, ದೇವೇಗೌಡರ ಬೀಜ ಬಲವಾಗಿದೆ .ಈ ರಾಜ್ಯದಲ್ಲಿ ಮತ್ತೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗ್ತಾರೆ.
ಸಿದ್ದರಾಮಯ್ಯ ಅವರನ್ನ ಸಿಎಂ ಮಾಡಲು ಕಾಂಗ್ರೆಸ್ಗೆ ಹೋದ್ವಿ. ಅವರನ್ನ ಬಾದಾಮಿಯಿಂದ ನಿಲ್ಲಿಸಿ ಗೆಲ್ಲಿಸಿದ್ದೇವೆ. ಜೆಡಿಎಸಗೆ ಕಾಂಗ್ರೆಸ್, ಬಿಜೆಪಿಯಿಂದ ಬರುತ್ತಾರೆ.
ರಮೇಶ್ ಜಾರಕಿಹೊಳಿ ಜೆಡಿಎಸ ಸೇರ್ಪಡೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನನಗೆ ಏನು ಗೊತ್ತಿಲ್ಲ. ಯಾರು ಬರ್ತಾರೆ ಅಂತಾ ಸ್ಥಳೀಯ ಬೆಳಗಾವಿ ನಾಯಕರು ಹೇಳ್ತಾರೆ.
ಉತ್ತರ ಕರ್ನಾಟಕದತ್ತ ಕುಮಾರಸ್ವಾಮಿ, ದೇವೇಗೌಡರ ಮುಖ ಮಾಡದ ವಿಚಾರಕ್ಕೆ ಸ್ಪಷ್ಟವಾಗಿ ಉತ್ತರ ನೀಡದ ಇಬ್ರಾಹಿಂ. ಈ ಬಾರಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಜೆಡಿಎಸ್ಗೆ ಹೆಚ್ಚಿನ ಸ್ಥಾನಗಳು ಬರಲಿವೆ . ಇಬ್ರಾಹಿಂ ಯಾವ ಕ್ಷೇತ್ರದಿಂದ ಸ್ಫರ್ಧೆ ಮಾಡ್ತೀರಾ. ನಾನು ಕಿಂಗ್ ಆಗಲ್ಲ ಕಿಂಗ್ ಮೇಕರ್ ಆಗೋ ಆಸೆ ಇದೆ.
ಇಬ್ರಾಹಿಂ ಬಿಟ್ಟ ಬಳಿಕ ಸಿದ್ದರಾಮಯ್ಯಗೆ ಕ್ಷೇತ್ರ ಸಿಗುತ್ತಿಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ತಬ್ಬಲಿ ನಿನಾದೇ ಮಗನೇ ಎಂದು ವ್ಯಂಗ್ಯವಾಡಿದರು. ಅವರು ವರಣಾದಿಂದ ಸ್ಪರ್ಧೆ ಮಾಡಿದ್ರೆ ಒಳ್ಳೆಯದು. ಸಿದ್ದರಾಮಯ್ಯ ಅವರು ಮೊದಲು ಅವರು ತಮ್ಮ ಸ್ವಂತ ಶಕ್ತಿಯನ್ನ ನಂಬಲಿ. ಇನ್ನೊಂದು ಶಕ್ತಿಯನ್ನ ನಂಬಬೇಡಿ, ಹುಷಾರಾಗಿರಿ ಎಂದು ಸಲಹೆ ನೀಡಿದರು.


Recent Comments