ಜಿಲ್ಲೆಯಲ್ಲಿ ಸುರಿದ ನಿರಂತೆ ಮಳೆಯಿಂದಾಗಿ ರೈತರು ಬೆಳೆದಿದ್ದ ಆಲುಗಡ್ಡೆ, ಸೋಯಾಬಿನ್ ಹಾಗು ಇತರೆ ಬೆಳೆಸೇರಿ ರೈತರಿಗೆ ಸಾಕಷ್ಟು ನಷ್ಟವಾಗಿದೆ. ಹಾಗೂ ಆ ಬೆಳೆಗಳಿಗೆ ಸೂಕ್ತ ಪರಿಹಾರವನ್ನು ನೀಡಬೇಕೆಂದು ಒತ್ತಾಯಿಸಿ, ಕರ್ನಾಕಟ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಳಗಾವಿ ತಾಲೂಕಾ ಘಟಕದ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಬೆಳಗಾವಿ ತಾಲೂಕಿನಾದ್ಯಂತ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ರೈತರು ಬೆಳೆದಿದ್ದ ಸೋಯಾಬಿನ್ ಹಾಗೂ ಆಲುಗಡ್ಡೆ ಬೆಳೆ ಹಾನಿಯಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹಾಳಾದ ಬೆಳೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ತಂದಿಟ್ಟು ಪ್ರತಿಭಟನೆ ನಡೆಸಿದರು. ಈ ಹಿಂದೆ ಲಾಕ್‍ಡೌನ್ ಸಂದರ್ಭದಲ್ಲಿ ರೈತರು ಬೆಳೆದಿದ್ದ ಕ್ಯಾಬೀಜ್ ಸೇರಿದಂತೆ ಇನ್ನಿತರ ತರಕಾರಿ ಬೆಳೆ ಹೊಲದಲ್ಲಿಯೇ ಕೊಳೆಯು ಹೋಗಿತ್ತು. ಆದರೆ ಆ ಸಂದರ್ಭದಲ್ಲಿ ರೈತರಿಗೆ ಸರಕಾರ ಪರಿಹಾರ ನೀಡದ ಹಿನ್ನೆಲೆ ರೈತರಿಗೆ ಸಾಕಷ್ಟು ತೊಂದರೆಯಾಗಿದೆ. ಹಾಗಾಗಿ ಅನೇಕ ರೈತರ ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಹಾಗಾಗಿ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ರೈತ ಮುಖಂಡರು, ತಾಲೂಕಿನಲ್ಲಿ ಸುರಿದ ನಿರಂತರ ಮಳೆಯಿಂದ ರೈತರು ಬೆಳೆದ ಸೋಯಾಬಿನ್ ಹಾಗೂ ಆಲುಗಡ್ಡೆಗಳು ಸಂಪೂರ್ಣವಾಗಿ ಮಳೆಯಿಂದ ಹಾಳಾಗಿವೆ. ಇನ್ನು ಒಂದು ಎಕರೆ ಬೆಳೆ ಬೆಳೆಯಲು ರೈತರಿಗೆ ಸುಮಾರು 20 ಸಾವಿರ ರೂಪಾಯಿ ಖರ್ಚು ಬರುತ್ತದೆ. ಈ ಅದೇ ಬೆಳೆ ಹಾಳಾಗಿದ್ದರಿಂದ ರೈತರು ಬದುಕುವುದು ಕಷ್ಟವಾಗುತ್ತದೆ. ಹಾಗಾಗಿ ಪ್ರತೀ ಎಕರೆಗೆ 50 ಸಾವಿರ ರೂಪಾಯಿ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ಲಾಕ್‍ಡೌನ್ ಸಂದರ್ಭದಲ್ಲಿ ರೈತರ ಕ್ಯಬೀಜ್ ಬೆಳೆ ಜಮೀನಿನಲ್ಲಿಯೇ ಕೊಳೆತು ಹೋಗಿದೆ. ಆಗಲೂ ಕೂಡ ಪರಿಹಾರ ನೀಡಲಿಲ್ಲ. ಹಾಗಾಗಿ ರೈತರು ಬದುಕುವುದು ಹೇಗೆ ಎಂದು ಪ್ರಶ್ನೆ ಮಾಡಿದರು. ಸರಕಾರದ ಈ ತಪ್ಪು ಕೃಷಿ ಧೋರಣೆಯಿಂದ ರೈತರ ಆತ್ಮಹತ್ಯೆಗಳಾಗುತ್ತಿವೆ ಎಂದರು ದೂರಿದರು.
ಈ ವೇಳೆ ಅಪ್ಪಾಸಾಹೇಬ್ ದೇಸಾಯಿ, ಮಾರುತಿ ಕಡೇಮನಿ, ಸುಭಾಷ್ ದಾಯಗೋಳ್, ರಾಜು ಕಾಗಣೀಕರ್, ರಾಮಚಂದ್ರ ಫಡಕೆ, ನಾಮದೇವ್ ದುಡುಮ್, ಚಂದ್ರು ರಾಜಾಯಿ, ದುಂಡಪ್ಪ ಪಾಟೀಲ್, ರಾಮಗೌಡ ಪಾಟೀಲ್, ಬಸು ಕೊರಡೆ, ಭೀಮಗೌಡ ಪಾಟೀಲ್, ಶಿವಾಜಿ ಬುರ್ಲೆ ಮೊದಲಾದವರು ಉಪಸ್ಥಿತರಿದ್ದರು.


Recent Comments