Vijayapura

ಮಹಿಳಾ ನ್ಯಾಯವಾದಿ ಬಂಧನ ಖಂಡಿಸಿ ವಿಜಯಪುರ ನ್ಯಾಯವಾದಿಗಳು ಪ್ರತಿಭಟನೆ ನಡೆಸಿದ್ದು, ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share

ಪೆÇಲೀಸರು ದೌರ್ಜನ್ಯದಿಂದ ಮಹಿಳಾ ನ್ಯಾಯವಾದಿಯನ್ನು ಬಂಧಿಸಿದ್ದಾರೆ ಅಂತ ಆರೋಪಿಸಿ ಪ್ರತಿಭಟನೆ ನಡೆಸಿ ಪೆÇಲೀಸರ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿರುವ ಘಟನೆ ವಿಜಯಪುರ ನ್ಯಾಯಾಲಯದಲ್ಲಿ ನಡೆದಿದೆ. ಇನ್ನು ಟೈಯರ್‍ಗೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿ ಮಹಿಳಾ ವಕೀಲೆ ಅರುಂಧತಿ ಪಾಟೀಲ್ ರನ್ನಜ ಪುರುಷ ಪೇದೆ ರಂಗಪ್ಪಗೋಳ ಬಂಧಿಸಿ ಕರೆತಂದಿದ್ದಾರೆ ಎಂದು ಆರೋಪಿಸಿದರು. ಗೋಳಗುಮ್ಮಟ ಪೆÇಲೀಸ್ ಠಾಣೆ ಪೆÇಲೀಸ್ ಪೇದೆ ರಂಗಪ್ಪಗೋಳ ಇವರನ್ನು ಅಮಾನತು ಮಾಡಲು ಆಗ್ರಹಿಸಿದರು.

: ಹೊಡೆದಾಟ ಕೇಸ್ ಸಂಬಂಧ ವಕೀಲೆ ವಿರುದ್ಧ ದಾಖಲಾಗಿದ್ದ ಕೇಸ್ ಇದಾಗಿದ್ದು ಗುರುದತ್ ಮಂಗಲ ಕಾರ್ಯಾಲಯದ ರಸ್ತೆ ವಿಚಾರವಾಗಿ ಹೊಡೆದಾಟ ಕೇಸ್ ನಡೆಯುತ್ತಿತ್ತು. ಕೋರ್ಟ್ ಕಲಾಪ ಬಹಿಷ್ಕರಿಸಿ,ಕೋರ್ಟ್ ಬಳಿಯ ಬಾಗಲಕೋಟೆ ವಿಜಯಪುರ ಸಂಪರ್ಕ ರಸ್ತೆ ತಡೆದು ಪ್ರತಿಭಟನೆ ನಡೆಸಿ ಸರ್ಕಲ್ ನಲ್ಲಿ ಮಾನವ ಸರಪಳಿ, ರಸ್ತೆ ಮೇಲೆ ಕುಳಿತು ಆಕ್ರೋಶ ಹೊರ ಹಾಕಿದರು. ಅರೆಸ್ಟ್ ವಾರೆಂಟ್ ರಿಕಾಲ್ ಇದ್ದಾಗಲೂ ಮಹಿಳಾ ವಕೀಲೆ ಬಂಧಿಸಿದ್ದಾರೆ ಎಂದು ಆರೋಪಿಸಿದರು.

ಸ್ಥಳಕ್ಕೆ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ರಾಮ ಅರಸಿದ್ದಿ ಭೇಟಿ ನೀಡಿ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿಗೆ ಪೆÇಲೀಸ್ ಸಿಬ್ಬಂದಿ ಸಸ್ಪೆಂಡ್‍ಗೆ ಪಟ್ಟು ಹಿಡಿದರು. ಇನ್ನೂ ಸ್ಥಳದಲ್ಲಿ ಹೈಡ್ರಾಮಾ, ವಕೀಲರ ಆಕ್ರೋಶ ಮಧ್ಯೆ ಗೊಂದಲ ಉಂಟಾದ ಪರಿಸ್ಥಿತಿ ನಿರ್ಮಾಣವಾಗಿ ವಕೀಲರಿಂದ ಮೂವರಿಗೆ ಥಳಿಸಿದ ಘಟನೆಯೂ ನಡೆಯಿತು. ಪ್ರತಿಭಟನೆ ವೇಳೆ ಅಡ್ಡ ಬಂದ ಎನ್ನುವ ಕಾರಣಕ್ಕೆ ಥಳಿಸಲಾಯಿತು. ಸ್ಥಳದಲ್ಲೆ ಇದ್ದ ಪೆÇಲೀಸರಿಂದ ಬಚಾವ್ ಆದರು. ನೂರಾರು ನ್ಯಾಯವಾದಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸ್ಥಳದಲ್ಲಿ ಪೆÇಲೀಸ್ ಬಿಗಿ ಬಂದೋಬಸ್ತ್ ನಿಯೋಜಸಲಾಗಿದೆ.

 

Tags: