Belagavi

ಸಿನಿಮೀಯ ರೀತಿಯಲ್ಲಿ ಸರ್ಕಾರಿ ಆಸ್ಪತ್ರೆಯಿಂದ ನವಜಾತ ಶಿಶು ಕಳ್ಳತನ: ಎರಡೂವರೆ ಗಂಟೆಯಲ್ಲಿ ಪೊಲೀಸರಿಂದ ಮಗು ಪತ್ತೆ. ಪೊಲೀಸ್ ತಂಡಕ್ಕೆ 20ಸಾವಿರ ಬಹುಮಾನ ಘೋಷಣೆ..!!

Share

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಆಸ್ಪತ್ರೆಯಲ್ಲಿ ನಿನ್ನೆಯಷ್ಟೇ ಜನಿಸಿದ್ದ ನವಜಾತ ಗಂಡು ಮಗುವನ್ನು ನರ್ಸ್ ವೇಶ ಧರಿಸಿ ಮಹಿಳೆಯೋರ್ವಳು ಕಳ್ಳತನ ಮಾಡಿದ್ದಳು. ಘಟನೆ ನಡೆದ ಎರಡೂವರೆ ಗಂಟೆಯಲ್ಲಿ ಮಗುವನ್ನು ಪತ್ತೆ ಹಚ್ಚಿ ತಾಯಿಗೆ ಹಸ್ತಾಂತರಿಸುವಲ್ಲಿ ಅಥಣಿ ಮತ್ತು ಕಾಗವಾಡ ಪೋಲಿಸರು ಯಶಸ್ವಿಯಾಗಿದ್ದು ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

ಇಂದು ಬೆಳಗಿನ ಜಾವ 10.15 ಕ್ಕೆ ಸರ್ಕಾರಿ ಆಸ್ಪತ್ರೆಗೆ ನರ್ಸ್ ವೇಷಧಾರಿಯಾಗಿ ಆಸ್ಪತ್ರೆಗೆ ಆಗಮಿಸಿದ್ದ ಓರ್ವ ಮಹಿಳೆ ಮತ್ತು ಅವರ ತಂಡ ನೇರವಾಗಿ ಆಸ್ಪತ್ರೆಯ ವಾರ್ಡ್ಗೆ ತೆರಳಿ ಎಲ್ಲ ಬಾಣಂತಿಯರು ತಾಯಿ ಕಾರ್ಡ್ ಹಾಗೂ ಆಧಾರ ಕಾರ್ಡ ಜರಾಕ್ಸ್ ಕೊಡಬೇಕು ಅಂತ ಹೇಳಿ ಗಮನ ಬೇರೆಡೆ ಸೆಳೆದಿದ್ದು ಅಂಬಿಕಾ ಅಮೀತ ಭೋವಿ ಎಂಬ ಬಾಣಂತಿಯ ಮಗುವನ್ನು ತೂಕ ಮಾಡಿ ಕೊಡುವದಾಗಿ ಹೇಳಿ ವಾರ್ಡನಿಂದ ಹೊರಗೆ ತೆಗೆದುಕೊಂಡು ಹೋಗಿದ್ದು ಅರ್ಧ ಗಂಟೆಯಾದರೂ ಮಗುವನ್ನು ಮರಳಿ ಕೊಡದೇ ಇದ್ದಾಗ ಆಸ್ಪತ್ರೆಯಲ್ಲಿ ವಿಷಯ ತಿಳಿದು ಅಥಣಿ ಪೋಲಿಸರಿಗೆ ಮಾಹಿತಿ ರವಾನಿಸಲಾಗಿತ್ತು.

ಆಸ್ಪತ್ರೆಯ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದ ಅಥಣಿ ಪೋಲಿಸರು ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಅಥಣಿ ಡಿವೈಎಸ್ಪಿ ಶ್ರೀಪಾದ ಜೇಲ್ದೆ ನೇತೃತ್ವದಲ್ಲಿ ಸಿಪಿಐ ರವೀಂದ್ರ ನಾಯ್ಕೋಡಿ ಮತ್ತು ಪಿಎಸ್ಐ ಶಿವಶಂಕರ ಮುಕ್ರಿ ಪ್ರತ್ಯೇಕ ತಂಡಗಳನ್ನು ರಚಿಸಿಕೊಂಡು ತನಿಖೆ ನಡೆಸಿದ್ದು ಮಗುವನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.ಘಟನೆಗೆ ಸಂಬAಧಿಸಿದAತೆ ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮೀರಜ್ ತಾಲೂಕಿನ ಮೈಶಾಳ ಗ್ರಾಮದ ಮಹಿಳೆಯೊಬ್ಬಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದಾರೆ.

ಇನ್ನು ಮಗು ನಾಪತ್ತೆಯಾದ ಸುದ್ದಿ ತಿಳಿಯುತ್ತಿದ್ದಂತೆ ಸಾರ್ವಜನಿಕರು ಆಸ್ಪತ್ರೆಯಲ್ಲಿ ಜಮಾವಣೆಗೊಂಡಿದ್ದು ಕೆಲಹೊತ್ತು ಗೊಂದಲದ ವಾತಾವರಣ ನಿರ್ಮಾಣವಾಗಿದ್ದಲ್ಲದೇ ಮಗು ಪತ್ತೆಯಾದ ಸುದ್ದಿ ತಿಳಿದು ನಿಟ್ಟುಸಿರು ಬಿಟ್ಟಿದ್ದು ,ಪತ್ರಿಕಾಗೋಷ್ಠಿ ನಡೆಸಿದ ಬೆಳಗಾವಿ ಎಸ್ಪಿ ಸಂಜೀವ ಪಾಟೀಲ್ ,ಅಥಣಿ ಮತ್ತು ಕಾಗವಾಡ ಪೋಲಿಸರ ಕಾರ್ಯವನ್ನು ಮುಕ್ತ ಕಂಠದಿAದ ಶ್ಲಾಘಿಸಿದ್ದರಲ್ಲದೇ ಯಶಸ್ವಿ ಕಾರ್ಯಾಚರಣೆ ನಡೆಸಿದ ಸಿಬ್ಬಂದಿಗಳಿಗೆ 20,000 ರೂಪಾಯಿ ನಗದು ಬಹುಮಾನ ಘೋಷಿಸಿದರು. ಇದೇ ವೇಳೆ ಡಿಜಿ ಹಾಗೂ ಐಜಿಪಿರವರೂ ಕೂಡ 20 ಸಾವಿರ ರೂಪಾಯಿ ಬಹುಮಾನವನ್ನು ಘೋಷಿಸಿದರು. ಸ್ಥಳೀಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಅನೇಕ ನ್ಯೂನತೆಗಳಿದ್ದು,ಆಸ್ಪತ್ರೆಯಲ್ಲಿ ಅಮೂಲಾಗ್ರ ಬದಲಾವಣೆ ಅಗತ್ಯವಾಗಿದೆ.ಈ ಕುರಿತು ಆಸ್ಪತ್ರೆಯ ಅಧಿಕಾರಿಗಳಿಗೆ ಸೂಚನೆ ನೀಡುವದಾಗಿ ತಿಳಿಸಿದರು.

ಈ ವೇಳೆ ಅಥಣಿ ಡಿವೈಎಸ್ಪಿ ಶ್ರೀಪಾದ ಜೆಲ್ದೆ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ಐ ಶಿವಶಂಕರ ಮುಕ್ರಿ, ಫೋಲಿಸ್ ಸಿಬ್ಬಂದಿಗಳು ಇದ್ದರು.

Tags: