ಬೆಳಗಾವಿ ನಗರದಲ್ಲಿ ಗಣೇಶೋತ್ಸವ ಆಚರಣೆ ವೇಳೆ ಗಣೇಶ ಮಂಡಳಗಳಲ್ಲಿ ಸಾವರ್‌ಕರ್‌ರವರ ಭಾವಚಿತ್ರಗಳನ್ನು ಹಾಕುವಂತೆ ಎಲ್ಲರ ಮನವೊಲಿಸಿ ನಾವೇ ಅವರಿಗೆ ಸಾವರ್‌ಕರ್‌ರವರ ಭಾವಚಿತ್ರಗಳನ್ನು ನೀಡುತ್ತೇವೆ ಎಂದು ಶಾಸಕ ಅನೀಲ್ ಬೆನಕೆ ಹೇಳಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬೆಳಗಾವಿ ಉತ್ತರ ಶಾಸಕರಾದ ಅನೀಲ್ ಬೆನಕೆ, ಬೆಳಗಾವಿ ಪ್ರತೀ ಗಲ್ಲಿಗಳಲ್ಲಿ ಎಲ್ಲೆಲ್ಲಿ ಗಣೇಶನನ್ನು ಕೂರಿಸಲಾಗುತ್ತದೆಯೋ ಅಲ್ಲೆಲ್ಲ ಸಾವರ್‌ಕರ್ ಭಾವಚಿತ್ರವನ್ನು ಹಾಕಲಾಗುತ್ತದೆ. ಈಗಾಗಲೇ ಈ ಕುರಿತಂತೆ ವಿಚಾರ ಮಾಡಲಾಗಿದೆ. ಸಾವರ್‌ಕರ್ ಬೆಳಗಾವಿಯಲ್ಲಿದ್ದರು. ಬೆಳಗಾವಿ ಜೈಲಿನಲ್ಲಿದ್ದರು. ಜೈಲ್‌ನಲ್ಲಿ ಅವರ ಫೋಟೊ ಹಾಕಲಾಗಿದೆ. ಹಾಗಾಗಿ ಸ್ವಾತಂತ್ರೊö್ಯÃತ್ಸವ ಅಮೃತಮಹೋತ್ಸವ ಪರಯುಕ್ತ ಅವರ ಭಾವಚಿತ್ರವನ್ನು ಕಡ್ಡಾಯವಾಗಿ ಹಾಕಲಾಗುತ್ತದೆ. ಎಲ್ಲರೂ ಕೂಡ ಸಾವರ್‌ಕರ್ ಬಾವಚಿತ್ರವನ್ನು ಹಾಕುವಂತೆ ಮನವೊಲಿಸಲಾಗುವುದು. ನಾವೇ ಅವರಿಗೆ ಸಾವರ್‌ಕರ್ ಭಾವಚಿತ್ರವನ್ನು ನೀಡುತ್ತೇವೆ. ಈ ಕುರಿತು ಎರಡು ಮಾತಿಲ್ಲ. ಸಾವರ್‌ಕರ್‌ರವರನ್ನು ನೆನಪು ಮಾಡಿಕೊಳ್ಳುವುದು ನಮ್ಮೆಲ್ಲರ ಕಾರ್ಯ ಎಂದರು.
ಇದೇ ವೇಳೆ ಸಾವರ್‌ಕರ್ ಕುರಿತಂತೆ ವಿರೋಧ ಪಕ್ಷದವರ ಟೀಕೆಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಸಾವರ್‌ಕರ್ ಜೈಲಿನಲ್ಲಿದ್ದರು. ಕಾಲಾಪಾನಿ ಶಿಕ್ಷೆಯನ್ನು ಅವರಿಗೆ ನೀಡಲಾಗಿತ್ತು. ತಮ್ಮ ಯವ್ವನವನ್ನು ದೇಶಕ್ಕಾಗಿ ಜೈಲಿನಲ್ಲಿ ಕಳೆದರು. ಇದರ ಕುರಿತಂತೆ ವಿರೋಧ ಪಕ್ಷದವರಿಗೆ ಏನೂ ಗೊತ್ತಿಲ್ಲ. ಸಾವರ್‌ಕರ್ ಬಗ್ಗೆ ವಿರೋಧ ಪಕ್ಷದವರಿಗೆ ಏನು ಗೊತ್ತಿದೆ ಎಂದು ಈ ವೇಳೆ ಪ್ರಶ್ನೆ ಮಾಡಿದರು. ದೇಶದ ಸ್ವಾತಂತ್ರö್ಯಕ್ಕಾಗಿ ಸಾವರ್‌ಕರ್ ತಮ್ಮ ಬರಹಗಳ ಮೂಲಕ ಜೀವತುಂಬಿದ್ದರು ಎಂದರು.


Recent Comments