Dharwad

ಮಿಂಚಿನಂತೆ ಸಂಚರಿಸಿದ ಜೋಡೆತ್ತುಗಳು ನೋಡುಗರ ಮೈ ನವಿರೇಳಿಸಿದ ಧಾರವಾಡ ಚಕ್ಕಡಿ ಓಟದ ಸ್ಪರ್ಧೆ..!

Share

ಈ ದೃಶ್ಯಗಳನ್ನು ನೋಡುಗರ ಮೈಯ್ಯಲ್ಲಿ ಮಿಂಚು ಸುಳಿದ ಅನುಭವವಾಗುತ್ತೆ. ನೋಡುಗರು ಪ್ರತೀಕ್ಷಣ ಹುಬ್ಬೇರಿಸುವಂತೆ ಓಡುತ್ತಿರುವ ಜೋಡೆತ್ತುಗಳು. ಮಿಂಚು ಸಂಚಾರವಾಗುವಂತೆ ನುಗ್ಗುತ್ತಿರುವ ರೈತನ ಜೊತೆಗಾರ. ಯಾವುದು ಈ ದೃಶ್ಯಗಳು ಅಂತೀರಾ…… ಹೌದು ಈ ಎಲ್ಲಾ ದೃಶ್ಯಗಳು ಕೃಷಿ ಕೆಲಸ ಮುಗಿಸಿ ಮನೆಯಲ್ಲಿರೋ ರೈತರು ಜೋಡೆತ್ತಿನ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಿದ್ದ, ಮೈ ನವಿರೇಳಿಸುವ ದೃಶ್ಯಗಳಿವು. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ…

 

ಜಿಲ್ಲೆಯಲ್ಲಿ ಹಿಂಗಾರಿ ಕೃಷಿ ಚಟುವಟಿಕೆಗಳು ಮುಗಿದು ರೈತರು P ನಿರಾಳರಾಗಿದ್ದಾರೆ. ವರ್ಷವಿಡೀ ದುಡಿದ ಅನ್ನದಾತನಿಗೆ ದಣಿವಾರಿಸಿಕೊಳ್ಳಲು ಈಗ ಕೊಂಚ ಬಿಡುವು ಸಿಕ್ಕಿದೆ. ಇದೇ ರಿಲೀಫ್‍ನಲ್ಲಿರೋ ಧಾರವಾಡದ ರೈತರು ಜೋಡೆತ್ತಿನ ಚಕ್ಕಡಿ ಬಂಡಿ ಓಟದ ಸ್ಪರ್ಧೆಯನ್ನು ಆಯೋಜನೆ ಮಾಡಿದ್ರು. ಹೊಸ ವರ್ಷದ ಅಂಗವಾಗಿ ಧಾರವಾಡ ತಾಲೂಕಿನ ಚಿಕ್ಕಮಲ್ಲಿಗೆವಾಡ ಗ್ರಾಮದಲ್ಲಿ ಖಾಲಿ ಚಕ್ಕಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ಗ್ರಾಮದ ಚಕ್ಕಡಿ ದಾರಿಯಲ್ಲೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೇರೆ ಬೇರೆ ಊರುಗಳಿಂದ ತಮ್ಮ ಇಷ್ಟದ ಎತ್ತುಗಳೊಂದಿಗೆ ಆಗಮಿಸಿದ್ದ ರೈತರು, ಉತ್ಸಾಹದಿಂದಲೇ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಇಲ್ಲಿ ಜಯ ದಾಖಲಿಸಿದವರಿಗೆ ಒಂದೂವರೆ ಲಕ್ಷದವರೆಗೆ ಬಹುಮಾನ ನೀಡಲಾಗಿತ್ತು.

 

ಒಂದು ನಿಮಿಷದ ಸ್ಪರ್ಧೆಯ ಅವಧಿಯಲ್ಲಿ ಎಷ್ಟು ದೂರ ಜೋಡಿ ಎತ್ತುಗಳು ಚಕ್ಕಡಿಯೊಂದಿಗೆ ಸಾಗುತ್ತವೆ ಅನ್ನುವುದರ ಮೇಲೆ ವಿಜೇತರನ್ನು ಆಯ್ಕೆ ಮಾಡಲಾಗುತ್ತೆ. ಮೆಲ್ನೋಟಕ್ಕೆ ಇಲ್ಲಿ ಸ್ಪರ್ಧೆ ಕಂಡ್ರೂ ಇದ್ರ ಹಿಂದೆ ಎತ್ತುಗಳನ್ನ ಮಾಡುವ ತಂತ್ರವೂ ಇತ್ತು. ಹೌದು ಕೃಷಿ ಚಟುವಟಿಕೆ ಮುಗಿಸಿರೋ ಎತ್ತುಗಳು ಕೆಲಸವಿಲ್ಲದೇ ಸೋಮಾರಿಗಳಾಗಿರುತ್ತವೆ. ಆ ಎತ್ತುಗಳಿಗೆ ಕೊಂಚ ದೈಹಿಕ ಕಸರತ್ತು ಸಿಗಲಿ ಅನ್ನೋ ಉದ್ದೇಶಕ್ಕೂ ಕೂಡ ಇಂಥ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ.

ಒಟ್ನಲ್ಲಿ ಕೃಷಿ ಕೆಲಸ ಮುಗಿಸಿರೋ ರೈತರು, ರಿಲೀಫ್ ಪಡೆಯಲು ಈಗ ಸ್ಪರ್ಧೆಯ ಮೊರೆ ಹೋಗಿದ್ದಾರೆ. ತಮ್ಮ ಎತ್ತುಗಳನ್ನೇ ಬಳಸಿಕೊಂಡು ಅಖಾಡದಲ್ಲಿ ಧೂಳೆಬ್ಬಿಸಿದ್ದಾರೆ.

Tags: