Belagavi

ಮಾರಿಹಾಳದಲ್ಲಿ ಮರಾಠಾ ಸಮಾಜಕ್ಕೆ ಸಾಂಸ್ಕøತಿಕ ಭವನ: ಲಕ್ಷ್ಮೀ ಹೆಬ್ಬಾಳ್ಕರ್ ಭರವಸೆ

Share

ಬೆಳಗಾವಿ ತಾಲೂಕಿನ ಮಾರಿಹಾಳ ಗ್ರಾಮದ ಮರಾಠಾ ಸಮಾಜದ ಮುಖಂಡರು ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಭೇಟಿಯಾಗಿ ಗ್ರಾಮದಲ್ಲಿ “ಮರಾಠಾ ಸಾಂಸ್ಕøತಿಕ ಭವನ” ನಿರ್ಮಾಣ ಮಾಡಲು ಸರಕಾರದಿಂದ ಅನುದಾನ ಮಂಜೂರು ಮಾಡಿಸಿಕೊಡಬೇಕೆಂದು ಮನವಿ ಸಲ್ಲಿಸಿದರು.

ಸಮಾಜದ ಮುಖಂಡರ ಮನವಿಯನ್ನು ಸ್ವೀಕರಿಸಿದ ಲಕ್ಷ್ಮೀ ಹೆಬ್ಬಾಳಕರ್, ಆದಷ್ಟು ಬೇಗ ಈ ಪ್ರಸ್ತಾವನೆಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿ, ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ರಾಮಚಂದ್ರ ಚವ್ಹಾಣ, ಬಸವರಾಜ ಮ್ಯಾಗೋಟಿ, ಫಕೀರ ಸಂಗೋಜಿ, ವಿಠ್ಠಲ್ ಮಲ್ಲಾರಿ, ಶಿವರಾಯಿ ಸಾಳುಂಕೆ, ವಿನೋದ ಚವ್ಹಾಣ, ಅಶೋಕ ಸಾಳುಂಕೆ, ಸದಾಶಿವ ಧರ್ಮೋಜಿ, ಸುರೇಶ ಕಿತ್ತೂರ, ಬಸವಣ್ಣಿ ಜಾನಕಿ, ನಾರಾಯಣ ಜಾನಕಿ ಸಿದರಾಮ ಮುಗಳಿ, ರಾಮ ಸಂಗೋಜಿ ಮುಂತಾದವರು ಉಪಸ್ಥಿತರಿದ್ದರು.

Tags: