ಬೆಳಗಾವಿಯ ಸಹ್ಯಾದ್ರಿ ನಗರದ ಮನೆಯಲ್ಲಿ ಕಳ್ಳತನದ ಪ್ರಕರಣ ಬೆಳಕಿಗೆ ಬಂದಿದ್ದು, ಘಟನೆಗೆ ಸಂಬಂಧಿಸಿದಂತೆ ಜನರು ಓರ್ವ ವ್ಯಕ್ತಿಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ಧಾರೆ.
ದಿನದಿಂದ ದಿನಕ್ಕೆ ಬೆಳಗಾವಿ ನಗರದಲ್ಲಿ ಕಳ್ಳತನದ ಪ್ರಕರಣಗಳು ಹೆಚ್ಚುತ್ತಲೇ ಇವೆ. ಗುರುವಾರ ಸಾಯಂಕಾಲ 7 ಗಂಟೆ ಸುಮಾರಿಗೆ ಸಹ್ಯಾದ್ರಿನಗರದಲ್ಲಿ ಬಸವರಾಜ್ ಡೂಗನವರ ಎಂಬುವವರ ಮನೆಯಲ್ಲಿ ಯಾರು ಇಲ್ಲದ ಸಮಯವನ್ನ ಸಾಧಿಸಿ ಮೂರು ಜನರು ಒಳನುಗ್ಗಿದ್ದಾರೆ. ಈ ವೇಳೆ ಅವರಲ್ಲಿ ಓರ್ವ ಮನೆ ಹೊರಗಡೆ ಕಾವಲು ನಿಂತಿದ್ದ. ಮುಂದಿನ ಮನೆಯವರು ಈ ವ್ಯಕ್ತಿಯ ನಡೆವಡೆಯಿಂದ ಸಂಶಯಿತಗೊಂಡು, ಆತನನ್ನ ಮಾತನಾಡಿಸಿದ್ದಾರೆ. ಇದರಿಂದ ಹೆದರಿ ಒಳಗಿದ್ದ ಮೂವರು ಓಡಿ ಹೋಗಿದ್ದಾರೆ. ಜನರು ಕೈಗೆ ಸಿಕ್ಕ ಈ ಸಂಶಯಿತ ಯುವಕನನ್ನ ಹಿಡಿದು ಎಪಿಎಂಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸ್ಥಳೀಯರಿಂದ ದೊರೆತ ಮಾಹಿತಿಯ ಅನುಸಾರ ಈ ಎಲ್ಲ ಜನರು ಅಪ್ರಾಪ್ತರಾಗಿದ್ದಾರೆ. ಪೊಲೀಸ್ ತನಿಖೆಯನ್ನ ಮುಂದುವರೆಸಿದೆ.
Recent Comments